ವಿಶ್ವಕಪ್‌ಗೆ “ಪ್ರಸೆಂಟರ್‌’ ಬೆಡಗಿಯರ ರಂಗು!

Team Udayavani, May 30, 2019, 6:00 AM IST

x-7

ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ರಂಗು ಹೆಚ್ಚಲು ಈ ಸಲ ಕೆಲವು ಮಹಿಳಾಮಣಿಯರೂ ಇದ್ದಾರೆ. ಮೈದಾನದಾಚೆ “ಪ್ರಸೆಂಟರ್‌’ ಆಗಿ ಕಾಣಿಸಿಕೊಳ್ಳಲಿರುವ ಈ ಬೆಡಗಿಯರನ್ನು ಪರಿಚಯಿಸಿಕೊಳ್ಳೋಣ.

* ಜೈನಾಬ್‌ ಅಬ್ಟಾಸ್‌
ಪಾಕಿಸ್ಥಾನದವರಾದ ಜೈನಾಬ್‌ ಅಬ್ಟಾಸ್‌ ತವರಿನಲ್ಲಿ ಪಿಎಸ್‌ಎಲ್‌ ಸೇರಿ ಹಲವು ಕ್ರಿಕೆಟ್‌ ಶೋಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅಂತೆಯೇ ಅನೇಕ ಖ್ಯಾತ ಆಟಗಾರರ ಮತ್ತು ಕ್ರಿಕೆಟ್‌ ಅಧಿಕಾರಿಗಳ ಸಂದರ್ಶನಗಳನ್ನು ಮಾಡಿದ್ದಾರೆ. ಕ್ರಿಕೆಟ್‌ನ ಉತ್ತಮ ಜ್ಞಾನ ಮತ್ತು ಅನುಭವ ಹೊಂದಿರುವ ಜೈನಾಬ್‌ ಪಕ್ಷಪಾತರಹಿತವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅವರು ಮಾಡಿರುವ ಸಂದರ್ಶನಗಳು, ಕ್ರಿಕೆಟಿಗರ ಜತೆಗಿನ ಮಾತುಕತೆಗಳು ನಿಜಕ್ಕೂ ಲವಲವಿಕೆಯಿಂದ ಕೂಡಿವೆ.

* ರಿಧಿಮಾ ಪಾಠಕ್‌
ಪುಣೆಯ ರಿಧಿಮಾ ಪಾಠಕ್‌ ಅವರದ್ದು ಬಹುಮುಖೀ ಅಭಿರುಚಿ. ರೇಡಿಯೊ ಜಾಕಿ ಆಗಿ ವೃತ್ತಿಜೀವನ ಪ್ರಾರಂಭಿಸಿದ ಅವರು ಎಂಜಿನಿಯರಿಂಗ್‌ ಕಲಿಯುತ್ತಿರುವಾಗಲೇ ಇನ್ನೂ ಹಲವು ಕೆಲಸಗಳನ್ನು ಹುಡುಕಿಕೊಂಡಿದ್ದರು. ನಟಿ, ಮಾಡೆಲ್‌, ಟಿವಿ ನಿರೂಪಕಿ… ಹೀಗೆ ನಾನಾ ಅವತಾರಗಳಲ್ಲಿ ರಿಧಿಮಾ ಕಾಣಿಸಿಕೊಂಡಿದ್ದಾರೆ. ಕೊಂಚ ಸಮಯ ಕಾರ್ಪೋರೇಟ್‌ ಕಂಪೆನಿಯೊಂದರಲ್ಲಿ ನೌಕರಿ ಮಾಡಿದ ಬಳಿಕ ಅವರು ಕ್ರಿಕೆಟ್‌ ಫೀಲ್ಡ್‌ಗೆ ಬಂದರು. ಸ್ಟಾರ್‌ ನ್ಪೋರ್ಟ್ಸ್, ಸೋನಿ ಸಿಕ್ಸ್‌, ಟೆನ್‌ ನ್ಪೋರ್ಟ್ಸ್, ಝೀ ಸ್ಟುಡಿಯೊ ಮತ್ತಿತರ ಚಾನೆಲ್‌ಗ‌ಳಲ್ಲಿ ಕ್ರೀಡಾ ನಿರೂಪಕಿಯಾಗಿ ಹಲವು ಖ್ಯಾತ ಆಟಗಾರರ ಸಂದರ್ಶನ ಮಾಡಿದ್ದಾರೆ. ಏಶ್ಯನ್‌ ಗೇಮ್ಸ್‌-2018ಕ್ಕೂ ಅವರು ನಿರೂಪಕಿಯಾಗಿದ್ದರು. ಇತ್ತೀಚೆಗಷ್ಟೇ ವಿರಾಟ್‌ ಕೊಹ್ಲಿ ಹಾಗೂ ಇತರ ಆಟಗಾರರ ಸಂದರ್ಶನ ಮಾಡಿ ಮಿಂಚಿದ್ದಾರೆ.

* ಎಲ್ಮಾ ಸ್ಮಿತ್‌
ದಕ್ಷಿಣ ಆಫ್ರಿಕಾದ ಎಲ್ಮಾ ಸ್ಮಿತ್‌ ಕೂಡ ವೃತ್ತಿ ಜೀವನ ಪ್ರಾರಂಭಿಸಿದ್ದು ರೇಡಿಯೊ ಜಾಕಿ ಆಗಿ. ನ್ಯೂಜಿಲ್ಯಾಂಡ್‌ನ‌ಲ್ಲಿ ನಡೆದ ರಗಿº ವರ್ಲ್ಡ್ ಕಪ್‌ 2011ರ ಪ್ರಸೆಂಟರ್‌ ಆದ ಬಳಿಕ ಎಲ್ಮಾ ಕ್ರೀಡಾ ಜಗತ್ತಿನಲ್ಲಿ ಖ್ಯಾತರಾದರು. 2011ರಲ್ಲಿ ಎಂಕೆ ಅವಾರ್ಡ್ಸ್‌ ಪ್ರಶಸ್ತಿ ಪ್ರದಾನ ಸಮಾರಂಭದ ನಿರೂಪಕಿಯಾದದ್ದು ಅವರ ಕಿರುತೆರೆಯ ಮೊದಲ ಅನುಭವ. ಸೂಪರ್‌ ನ್ಪೋಟ್‌ರ್ಸ ಟಿವಿಯ ನಿರೂಪಕಿಯಾಗಿರುವ ಎಲ್ಮಾ ಕ್ರಿಕೆಟ್‌ ಪ್ರಸೆಂಟೇಶನ್‌ನಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ.

* ಪೆಯಾ ಜನ್ನತುಲ್‌
ಬಾಂಗ್ಲಾದೇಶದ ಮಾಡೆಲ್‌ ಪೆಯಾ ಜನ್ನತುಲ್‌ 2007ರ ಮಿಸ್‌ ಬಾಂಗ್ಲಾ ಸೌಂದರ್ಯ ಸ್ಪರ್ಧೆಯ ವಿಜೇತೆ. ವೃತ್ತಿಯಿಂದ ವಕೀಲೆಯಾಗಿರುವ ಪೆಯಾ 2008ರಲ್ಲಿ ಮೋಡೆಲಿಂಗ್‌ ಲೋಕಕ್ಕೆ ಎಂಟ್ರಿ ಕೊಟ್ಟರು. 2013ರಲ್ಲಿ ಮಿಸ್‌ ಇಂಡಿಯನ್‌ ಪ್ರಿನ್ಸೆಸ್‌ ಇಂಟರ್‌ನ್ಯಾಶನಲ್‌ ಸೌಂದರ್ಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಸ್ಥಳೀಯ ಟಿವಿ ವಾಹಿನಿಗಳಲ್ಲಿ ಕ್ರಿಕೆಟ್‌ ನಿರೂಪಕಿಯಾಗಿ ಜನಪ್ರಿಯರಾಗಿರುವ ಪೆಯಾರನ್ನು ಟಿವಿ ವಾಹಿನಿಯೊಂದು ಬಾಂಗ್ಲಾ ತಂಡದ ಕವರೇಜ್‌ಗಾಗಿ ಕಳುಹಿಸಿದೆ.

* ಮಾಯಾಂತಿ ಲ್ಯಾಂಗರ್‌
ಹಲವು ವರ್ಷಗಳಿಂದ ಸ್ಟಾರ್‌ ನೆಟ್‌ವರ್ಕ್‌ ಸಮೂಹದಲ್ಲಿರುವ ಮಾಯಾಂತಿ ಲ್ಯಾಂಗರ್‌ ಭಾರತದ ಜನಪ್ರಿಯ ನ್ಪೋರ್ಟ್‌ ಪ್ರಸೆಂಟರ್‌. ಭಾರತೀಯ ಕ್ರೀಡಾಪ್ರೇಮಿಗಳಿಗೆ ಮಾಯಾಂತಿಯನ್ನು ವಿಶೇಷವಾಗಿ ಪರಿಚಯಿಸುವ ಅಗತ್ಯವಿಲ್ಲ. ಮಾಯಾಂತಿ ಕ್ರೀಡಾ ಪ್ರಸೆಂಟೇಶನ್‌ ವೃತ್ತಿಯನ್ನು ಆರಂಭಿಸಿದ್ದು ಫ‌ುಟ್‌ಬಾಲ್‌ ಪ್ರಸೆಂಟರ್‌ ಆಗಿ. ಫಿಫಾ ವರ್ಲ್ಡ್ಕಪ್‌ 2010ರಲ್ಲಿ ಅವರು ಪ್ರಸೆಂಟರ್‌ ಆಗಿದ್ದರು. ಅನಂತರ ಕ್ರಿಕೆಟ್‌ ಒಲವು ಬೆಳೆಸಿಕೊಂಡ ಮಾಯಾಂತಿ 2011ಮತ್ತು 2015ರ ವಿಶ್ವಕಪ್‌ಗ್ೂ ಪ್ರಸೆಂಟರ್‌ ಆಗಿದ್ದರು. ಈ ಸಲದ ಪ್ರಸೆಂಟರ್‌ಗಳಲ್ಲಿ ಮಾಯಾಂತಿಯೇ ಹೆಚ್ಚು ಅನುಭವಿ ಎನ್ನಲಡ್ಡಿಯಿಲ್ಲ. ಸ್ಟಾರ್‌ ವಾಹಿನಿಯ ಪರವಾಗಿ ಅವರು ಈ ಸಲ ಇಂಗ್ಲೆಂಡ್‌ನ‌ಲ್ಲಿರುತ್ತಾರೆ.

ಟಾಪ್ ನ್ಯೂಸ್

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

2

Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

1(1

Puttur ನಗರಕ್ಕೂ ಬೇಕು ಟ್ರಾಫಿಕ್‌ ಸಿಗ್ನಲ್‌

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.