ಏಕದಿನ ಆರಂಭವೇ ಆಕಸ್ಮಿಕ!

ಏಕದಿನ ಅಂತಾರಾಷ್ಟ್ರೀಯ ಪಂದ್ಯದ ಆರಂಭದ ಹಿಂದೆ ಅದೆಷ್ಟು ರೋಚಕ ಘಟನೆಗಳು!

Team Udayavani, May 17, 2019, 9:31 AM IST

1st-match

ಅದು 1970-71ರ ಆಸ್ಟ್ರೇಲಿಯ-ಇಂಗ್ಲೆಂಡ್‌  ನಡುವಿನ ಆ್ಯಶಸ್‌ ಸರಣಿ. ಮೊದಲೆರಡು ಟೆಸ್ಟ್‌ ನೀರಸ ಡ್ರಾದಲ್ಲಿ ಅಂತ್ಯಗೊಂಡಿದ್ದವು. 3ನೇ ಟೆಸ್ಟ್‌ಗೆಂದು ಮೆಲ್ಬರ್ನ್ಗೆ ಹೋದಾಗ ಅಲ್ಲಿಯೂ  ಮಳೆರಾಯನ ಸ್ವಾಗತ! ಮೊದಲೆರಡು ದಿನಗಳ ಆಟವನ್ನು ಮುಂಚಿತವಾಗಿಯೇ ರದ್ದುಗೊಳಿಸಲಾಗಿತ್ತು. ಈ ಪಂದ್ಯವನ್ನು  ಹೊಸತಾಗಿ 2 ದಿನ ವಿಳಂಬವಾಗಿ ಆರಂಭಿಸಲು ಎರಡೂ ಮಂಡಳಿಗಳು ಒಪ್ಪಲಿಲ್ಲ. 3ನೇ ದಿನವೂ ಮಳೆಯಾಟ ಮುಂದುವರಿಯಿತು. ಮೆಲ್ಬರ್ನ್ ಆಡಳಿತ ಮಂಡಳಿಗೆ ಆಗಲೇ 80 ಸಾವಿರ ಡಾಲರ್‌ ನಷ್ಟವಾಗಿತ್ತು. ಹೀಗಾಗಿ ಈ ಸರಣಿ ಬಳಿಕ ಹೆಚ್ಚುವರಿಯಾಗಿ 7ನೇ ಟೆಸ್ಟ್‌ ಆಡಿಸಲು ಆಸೀಸ್‌ ಯೋಚಿಸಿತು. ಆಗ ಇಂಗ್ಲೆಂಡ್‌ ಆಟಗಾರರು ಹೆಚ್ಚು ಸಂಭಾವನೆಯ ಬೇಡಿಕೆಯಿಟ್ಟರು.

ಈ ಎಲ್ಲ ವಿದ್ಯಮಾನಗಳಿಂದ ಮೆಲ್ಬರ್ನ್ ವೀಕ್ಷಕರೂ ನಿರಾಸೆಗೊಂಡಿದ್ದರು. ಆಗ ಹೊಳೆದದ್ದೇ ಇಂಗ್ಲೆಂಡಿನ “ಜಿಲೆಟ್‌ ಕಪ್‌’ ಪಂದ್ಯಾವಳಿ. ಇದು ಒಂದು ದಿನದಲ್ಲಿ ಮುಗಿಯುವ ಸೀಮಿತ ಓವರ್‌ಗಳ ಪಂದ್ಯವಾಗಿತ್ತು. ವೀಕ್ಷಕರನ್ನು ರಂಜಿಸುವ, ಮಂಡಳಿಯ ನಷ್ಟವನ್ನೂ ತುಂಬುವ ಸಲುವಾಗಿ ಮೆಲ್ಬರ್ನ್ ಟೆಸ್ಟ್‌ ಪಂದ್ಯದ 5ನೇ ದಿನ ಇಂಥದೊಂದು ಪಂದ್ಯವನ್ನು ಆಡಲು ನಿರ್ಧರಿಸಲಾಯಿತು. ತಂಡಗಳಿಗೆ ಇಂಗ್ಲೆಂಡ್‌ ಇಲೆವೆನ್‌ ಮತ್ತು ಆಸ್ಟ್ರೇಲಿಯ ಇಲೆವೆನ್‌ ಎಂದು ಹೆಸರಿಸಲಾಯಿತು. ತಂಬಾಕು ಕಂಪೆನಿ ರಾಥ್ಮ್ಯಾನ್ಸ್ ಕೊನೆಯ ಹಂತದಲ್ಲಿ ಪ್ರಾಯೋಜನೆ ವಹಿಸಿ 5 ಸಾವಿರ ಡಾಲರ್‌ ಹಾಗೂ ಪಂದ್ಯಶ್ರೇಷ್ಠನಿಗೆ 90 ಡಾಲರ್‌ ನೀಡಲು ಮುಂದಾಯಿತು. ಇದೇ ಕ್ರಿಕೆಟ್‌ ಇತಿಹಾಸದ ಪ್ರಪ್ರಥಮ ಏಕದಿನ ಅಂತಾರಾಷ್ಟ್ರೀಯ ಪಂದ್ಯ!

ಅದೃಷ್ಟವಶಾತ್‌ ಇದಕ್ಕೆ ಮಳೆಯಿಂದ ಯಾವುದೇ ಅಡಚಣೆಯಾಗಲಿಲ್ಲ. ಇದು ತಲಾ 40 ಓವರ್‌ಗಳ ಪಂದ್ಯವಾಗಿತ್ತು. ಓವರಿಗೆ 8 ಎಸೆತಗಳಾಗಿದ್ದವು. ಆಸ್ಟ್ರೇಲಿಯ ಇದನ್ನು 5 ವಿಕೆಟ್‌ಗಳಿಂದ ಗೆದ್ದಿತು. ಇಂಗ್ಲೆಂಡ್‌ 39.4 ಓವರ್‌ಗಳಲ್ಲಿ 190ಕ್ಕೆ ಆಲೌಟಾದರೆ, ಆಸ್ಟ್ರೇಲಿಯ 34.6 ಓವರ್‌ಗಳಲ್ಲಿ 5 ವಿಕೆಟಿಗೆ 191 ರನ್‌ ಬಾರಿಸಿತು. ರೇ ಇಲ್ಲಿಂಗ್‌ವರ್ತ್‌ ಮತ್ತು ಬಿಲ್‌ ಲಾರಿ ಇತ್ತಂಡಗಳ ನಾಯಕರಾಗಿದ್ದರು. ಈ ಪಂದ್ಯ ನಡೆದ ನಾಲ್ಕೇ ವರ್ಷಗಳಲ್ಲಿ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಉಗಮವಾದದ್ದು ಇನ್ನೊಂದು ವಿಸ್ಮಯ!

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.