ಭಾರತವೆಂದರೆ ಜೋಶ್ ಪಾಕಿಸ್ಥಾನ ನರ್ವಸ್!
Team Udayavani, Jun 18, 2019, 5:00 AM IST
ಮ್ಯಾಂಚೆಸ್ಟರ್: ವಿಶ್ವಕಪ್‌ನಂಥ ದೊಡ್ಡ ಪಂದ್ಯಾವಳಿಯಲ್ಲಿ ಭಾರತ ಪ್ರತೀ ಸಲವೂ ಪಾಕಿಸ್ಥಾನ ವಿರುದ್ಧ ಏಕೆ ಗೆಲ್ಲುತ್ತದೆ, ಪಾಕಿಸ್ಥಾನವೇಕೆ ಯಾವಾಗಲೂ ಮಣ್ಣು ಮುಕ್ಕುತ್ತದೆ? ಇದು ಎಲ್ಲರನ್ನೂ ಕಾಡುವ ಕುತೂಹಲ. ಇದಕ್ಕೆ ಒಂದೇ ವಾಕ್ಯದ ಉತ್ತರವೆಂದರೆ “ಭಾರತದ ಜೋಶ್ ಮುಂದೆ ಪಾಕಿಸ್ಥಾನ ಪೂರ್ತಿ ನರ್ವಸ್ ಆಗುವುದು…’
ಇದಕ್ಕೆ ತಾಜಾ ಉದಾಹರಣೆ ರವಿವಾರ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಅಂಗಳದಲ್ಲಿ ಕಾಣಸಿಕ್ಕಿತು. ವಿಶ್ವಕಪ್‌ನಲ್ಲಿ ಭಾರತದೆದುರು ಪಾಕ್ ಪಡೆಗೆ ಏಳರಲ್ಲೂ ಏಳYತಿ ಇಲ್ಲದಂತಾಯಿತು.
ಪಾಕನ್ನು ಮಣಿಸುವುದೇ ಭಾರತದ ಗುರಿ
ಬದ್ಧ ಎದುರಾಳಿ ಪಾಕಿಸ್ಥಾನ ಎಂದೊಡನೆ ಟೀಮ್ ಇಂಡಿಯಾದಲ್ಲಿ ಎಲ್ಲಿಲ್ಲದ ಜೋಶ್, ಸ್ಪಿರಿಟ್ ಉಕ್ಕುತ್ತದೆ. ಪಾಕಿಸ್ಥಾನವನ್ನು ಬಗ್ಗುಬಡಿಯುವುದೊಂದೇ ಗುರಿ ಆಗಿರುತ್ತದೆ.
ಇನ್ನೊಂದೆಡೆ “ಎದುರಾಳಿ ಭಾರತ’ ಎಂದೊಡನೆ ಪಾಕಿಸ್ಥಾನ ಸಂಪೂರ್ಣ ನರ್ವಸ್ ಆಗುತ್ತದೆ. ಎಲ್ಲ ದಿಕ್ಕುಗಳಿಂದ ಒತ್ತಡ ಬೀಳುವುದರಿಂದ ಅವರಿಗೆ ಆಡುವುದೂ ಮರೆತು ಹೋಗುತ್ತದೆ!
ರವಿವಾರದ ಪಂದ್ಯವನ್ನಂತೂ ಪಾಕಿಸ್ಥಾನ ಸ್ವಲ್ಪವೂ ಪೂರ್ವ ತಯಾರಿ ಇಲ್ಲದೆ ಆಡಿದಂತಿತ್ತು. ಅವರ ಆಟದಲ್ಲಿ ಯಾವುದೇ ಕಾರ್ಯತಂತ್ರವಾಗಲಿ, ರಣತಂತ್ರವಾಗಲಿ ಕಾಣಿಸಲಿಲ್ಲ. ಟಾಸ್ ಗೆದ್ದ ಪಾಕಿಸ್ಥಾನ ಫೀಲ್ಡಿಂಗ್ ಆರಿಸಿಕೊಂಡದ್ದೇ ಮೊದಲ ಬ್ಲಿಂಡರ್. ಭಾರತದೆದುರು ಪಾಕ್ ಚೇಸ್ ಮಾಡಿ ಗೆದ್ದದ್ದೇ ಅಪರೂಪ. ಪ್ರಧಾನಿ ಇಮ್ರಾನ್ ಸಹಿತ ಅನೇಕರು ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವ ಸಲಹೆ ನೀಡಿದ್ದರೂ ಸಫìರಾಜ್ ಇದನ್ನು ಮೂಲೆಗುಂಪು ಮಾಡಿದರು. ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕ್ ಆಡಿದ ಅತ್ಯಂತ ಕೆಟ್ಟ ಆಟಕ್ಕೆ ಇದೇ ಮುನ್ನುಡಿಯಾಯಿತು.
ಮತ್ತೆ ಮುಖಾಮುಖೀ ಸಾಧ್ಯವೇ?
ಭಾರತ-ಪಾಕಿಸ್ಥಾನ ಈ ಕೂಟದಲ್ಲಿ ಮತ್ತೆ ಮುಖಾಮುಖೀಯಾಗುವ ಸಾಧ್ಯತೆ ಇದೆಯೇ? ಸೆಮಿಫೈನಲ್ ಅಥವಾ ಫೈನಲ್‌ನಲ್ಲಿ ಎದುರಾಗಬಹುದೇ? ದೂರದ ಕುತೂಹಲವೊಂದಿದೆ.
ಈ ಫಲಿತಾಂಶದಿಂದ ಭಾರತ 3ನೇ ಸ್ಥಾನ ಕಾಯ್ದುಕೊಂಡರೆ, ಪಾಕ್ 9ನೇ ಸ್ಥಾನಕ್ಕೆ ಕುಸಿದಿದೆ. ಹೀಗಿರುವಾಗ ಭಾರತ-ಪಾಕ್ ನಡುವೆ ಮತ್ತೂಂದು ಕ್ರಿಕೆಟ್ ಕದನ ಅನುಮಾನ. ನಡೆದರೂ ಪಾಕಿಗಳನ್ನು ಹೇಗೆ ನೆಲಕ್ಕೆ ಕೆಡವಬೇಕೆಂಬುದು ಕೊಹ್ಲಿ ಪಡೆಗೆ ತಿಳಿದಿದೆ. ಹೀಗಾಗಿ ಅದು ಮತ್ತೆ ಭಾರತದೆದುರಿನ ಪಂದ್ಯವನ್ನು ಖಂಡಿತವಾಗಿಯೂ ಬಯಸದು!
ದೂರದೃಷ್ಟಿ ಇಲ್ಲದ ನಾಯಕತ್ವ
ಮೈದಾನದಲ್ಲೇ ಆಕಳಿಸುತ್ತಿದ್ದ ಸಫìರಾಜ್ ಅಹ್ಮದ್ ಯಾವುದೇ ದೂರದೃಷ್ಟಿ, ಗೇಮ್‌ಪ್ಲ್ರಾನ್ ಹೊಂದಿಲ್ಲದ ನಾಯಕನೆಂಬುದನ್ನು ಸಾಬೀತುಪಡಿಸಿದರು. ಅವರ ವರ್ತನೆಗೆ ಪಾಕಿಸ್ಥಾನದಲ್ಲೇ ಭಾರೀ ಟೀಕೆ ವ್ಯಕ್ತವಾಗಿದೆ. ಅವರ ಯಾವ ನಿರ್ಧಾರಗಳೂ ತಂಡದ ಹಿತದೃಷ್ಟಿಯಿಂದ ಕೂಡಿರಲಿಲ್ಲ.
“ವಿಕೆಟ್ ಟೇಕರ್’ ಮೊಹಮ್ಮದ್ ಆಮಿರ್‌ಗೆ ಮೊದಲ ಸ್ಪೆಲ್‌ನಲ್ಲಿ ಕೇವಲ 3 ಓವರ್ ಕೊಟ್ಟು ಮುಗಿಸಿದ ಸಫìರಾಜ್, 12 ಓವರ್ ಒಳಗೆ ಎಲ್ಲ 5 ಪ್ರಮುಖ ಬೌಲರ್‌ಗಳನ್ನು ದಾಳಿಗಿಳಿಸಿದ್ದು ದೊಡ್ಡ ಬ್ಲಿಂಡರ್ ಎನಿಸಿತು. ಇದರಿಂದ ಭಾರತದ ಓಟಕ್ಕೆ ಯಾವುದೇ ಧಕ್ಕೆ ಆಗಲಿಲ್ಲ.
ಸಾಮಾನ್ಯವಾಗಿ ಭಾರತ ಎಡಗೈ ಬೌಲರ್‌ಗಳಿಗೆ ವಿಕೆಟ್ ಒಪ್ಪಿಸುವುದು ಜಾಸ್ತಿ. ಹೀಗಿರುವಾಗ ಅವರು ಶಹೀನ್ ಅಫ್ರಿದಿಯನ್ನು ಕೈಬಿಟ್ಟು ಹೆಚ್ಚು ವರಿ ಸ್ಪಿನ್ನಿಗೆ ಅವಕಾಶ ನೀಡಿದ್ದೂ ಎಡವಟ್ಟಿಗೆ ಕಾರಣವಾಯಿತು. ಪಾಕ್ ಫೀಲ್ಡಿಂಗ್ ಅಂತೂ ಅತ್ಯಂಕ ಕಳಪೆ ಆಗಿತ್ತು.
ರಾಹುಲ್ ಯಶಸ್ವಿ
ಈ ಪಂದ್ಯದಲ್ಲಿ ಭಾರತದ ಜಯಭೇರಿಗೆ ಕಾರಣಗಳು ಹಲವು. ಮೊದಲನೆಯದು ರೋಹಿತ್-ರಾಹುಲ್ ಜೋಡಿಯ ದಿಟ್ಟ ಓಪನಿಂಗ್. ರೋಹಿತ್ ಎಂದಿನಂತೆ ಬಿರುಸಿನ ಆಟಕ್ಕಿಳಿದರೆ, ರಾಹುಲ್ ಓಲ್ಡ್ ಟ್ರಾಫರ್ಡ್ ಅಂಗಳವನ್ನು ಅಂದಾಜಿಸುತ್ತ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. ಒಂದೆಡೆ ಪಾಕ್ ಬೌಲರ್‌ಗಳನ್ನು ದಂಡಿಸುವುದು, ಇನ್ನೊಂದೆಡೆ ರಕ್ಷಣಾತ್ಮಕ ಆಟವಾಡುವುದು ಆರಂಭಿಕರ ಗೇಮ್‌ಪ್ಲ್ರಾನ್ ಆಗಿತ್ತು. ಶಿಖರ್ ಧವನ್ ಅನುಪಸ್ಥಿತಿಯಲ್ಲಿ, ಪಾಕಿಸ್ಥಾನದಂಥ ಹೈ ವೋಲ್ಟೆàಜ್ ಪಂದ್ಯದಲ್ಲಿ ಆರಂಭಿಕನಾಗಿ ಇಳಿದ ರಾಹುಲ್ ಅವರ ಜವಾಬ್ದಾರಿಯುತ ಆಟ ಎಲ್ಲರ ಪ್ರಶಂಸೆ ಗಳಿಸಿತು. ತಾನು ಯಾವ ಕ್ರಮಾಂಕಕ್ಕೂ ಸೈ ಎಂಬುದನ್ನು ರಾಹುಲ್ ತೋರಿಸಿಕೊಟ್ಟಿದ್ದಾರೆ.
ರೋಹಿತ್ ಶರ್ಮ
ಬಿಂದಾಸ್ ಬ್ಯಾಟಿಂಗ್
ಒಮ್ಮೆ ಐವತ್ತರ ಗಡಿ ದಾಟಿದರೆ ತನ್ನನ್ನು ತಡೆಯುವುದು ಅಸಾಧ್ಯ ಎಂಬುದನ್ನು ರೋಹಿತ್ ಮತ್ತೂಮ್ಮೆ ಸಾಬೀತುಪಡಿಸಿದರು. ಯಾವತ್ತೂ ಲೆಗ್‌ಸ್ಪಿನ್ ವಿರುದ್ಧ ತಿಣುಕಾಡುವ ರೋಹಿತ್ ಇಲ್ಲಿ ಅಂಥ ಸಮಸ್ಯೆಗೆ ಸಿಲುಕಲಿಲ್ಲ. ಆರಂಭಿಕರ ಶತಕದ ಜತೆಯಾಟದಿಂದ ಭಾರತದ ಮೊತ್ತ ಮುನ್ನೂರರ ಗಡಿ ದಾಟಿ ಬೆಳೆಯಿತು. ಕಪ್ತಾನ ಕೊಹ್ಲಿ ಕೊಡುಗೆಯೂ ದೊಡ್ಡದಿತ್ತು. “ಮುನ್ನೂರು’ ಎಂದೊಡನೆ ಚೇಸಿಂಗ್ ಮಾಡುವ ಎಷ್ಟೇ ಬಲಿಷ್ಠ ತಂಡವೂ ಒಮ್ಮೆ ಅದುರುತ್ತದೆ. ಪಾಕಿಸ್ಥಾನವಂತೂ ಸಂಪೂರ್ಣ ನೆಲಸಮವಾಯಿತು.
ಬೊಂಬಾಟ್ ಬೌಲಿಂಗ್
ಬೌಲಿಂಗ್ ವಿಭಾಗದತ್ತ ಬಂದರೆ ವಿಜಯ್ ಶಂಕರ್ ಲಕ್ಕಿ ಎನಿಸಿಕೊಳ್ಳುತ್ತಾರೆ. ಭುವನೇಶ್ವರ್ ಗಾಯಾಳಾಗಿ ಹೊರನಡೆದುದರಿಂದ ಉಳಿದೆರಡು ಎಸೆತಗಳನ್ನಿಕ್ಕಲು ಕೊಹ್ಲಿ ವಿಜಯ್ ಶಂಕರ್‌ಗೆ ಸೂಚಿಸಿದರು. ಅವರು ಮೊದಲ ಎಸೆತದಲ್ಲೇ ಇಮಾಮ್‌ಗೆ ಪೆವಿಲಿಯನ್ ಹಾದಿ ತೋರಿಸಿದರು! ಕುಲದೀಪ್, ಪಾಂಡ್ಯ ಅವರ ದಾಳಿ ಪಂದ್ಯದ ಟರ್ನಿಂಗ್ ಪಾಯಿಂಟ್ ಎನಿಸಿತು.
ಬದ್ಧ ಎದುರಾಳಿ ಪಾಕಿಸ್ಥಾನ ಎಂದೊಡನೆ ಟೀಮ್ ಇಂಡಿಯಾದಲ್ಲಿ ಎಲ್ಲಿಲ್ಲದ ಜೋಶ್, ಸ್ಪಿರಿಟ್ ಉಕ್ಕುತ್ತದೆ. ಇನ್ನೊಂದೆಡೆ “ಎದುರಾಳಿ ಭಾರತ’ ಎಂದೊಡನೆ ಪಾಕಿಸ್ಥಾನ ಸಂಪೂರ್ಣ ನರ್ವಸ್ ಆಗುತ್ತದೆ. ಎಲ್ಲ ದಿಕ್ಕುಗಳಿಂದ ಒತ್ತಡ ಬೀಳುವುದರಿಂದ ಅವರಿಗೆ ಆಡುವುದೂ ಮರೆತು ಹೋಗುತ್ತದೆ!
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.