ಕಪಿಲ್ ಬದಲಿ ಆಯ್ಕೆ ರಹಾನೆ
Team Udayavani, Jun 14, 2019, 5:04 AM IST
ಹೊಸದಿಲ್ಲಿ: ಗಾಯಾಳು ಬ್ಯಾಟ್ಸ್ ಮನ್ ಶಿಖರ್ ಧವನ್ ಸ್ಥಾನಕ್ಕೆ ಅಜಿಂಕ್ಯ ರಹಾನೆ ಆಯ್ಕೆ ಸೂಕ್ತವಾಗುತ್ತಿತ್ತು ಎಂಬುದಾಗಿ ಭಾರತದ 1983ರ ವಿಶ್ವಕಪ್ ಹೀರೋ ಕಪಿಲ್‌ದೇವ್ ಅಭಿಪ್ರಾಯಪಟ್ಟಿದ್ದಾರೆ.
“ಅಜಿಂಕ್ಯ ರಹಾನೆ ಹೆಸರನ್ನು ಪರಿಗಣಿಸಿದ್ದೇ ಆದಲ್ಲಿ ಅವರೇ ಮೊದಲ ಆಯ್ಕೆ ಆಗುತ್ತಿದ್ದರು. ಪಂತ್, ರಾಯುಡು ಅವರನ್ನು ಮೀರಿಸಿದ ಆಯ್ಕೆ ಇದಾಗುತ್ತಿತ್ತು. ಅವರಿಗೆ ವಿಶ್ವಕಪ್‌ನಂಥ ದೊಡ್ಡ ಕೂಟಗಳಲ್ಲಿ ಆಡಿದ ಉತ್ತಮ ಅನುಭವವಿದೆ. ಇನ್ನಿಂಗ್ಸ್ ಆರಂಭಿಸುವ ಜತೆಗೆ ಮಧ್ಯಮ ಕ್ರಮಾಂಕದಲ್ಲೂ ಆಡುವ ಸಾಮರ್ಥ್ಯ ರಹಾನೆ ಅವರಲ್ಲಿದೆ’ ಎಂಬುದಾಗಿ ಕಪಿಲ್ ಹೇಳಿದರು.
ಅಜಿಂಕ್ಯ ರಹಾನೆ 2015ರ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 2018ರ ಫೆಬ್ರವರಿ ಬಳಿಕ ಏಕದಿನ ಪಂದ್ಯವನ್ನು ಆಡಿಲ್ಲ. ಏಕದಿನದಲ್ಲಿ 35.26ರ ಸ್ಟ್ರೈಕ್‌ರೇಟ್‌ನಲ್ಲಿ 2,962 ರನ್ ಗಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.