ಕೊಹ್ಲಿ, ಬೌಲ್ಟ್, ಆದಿಲ್‌ ರಶೀದ್‌ ಪ್ರಚಂಡ ಫಾರ್ಮ್

2015ರ ವಿಶ್ವಕಪ್‌ ಬಳಿಕ ಮಿಂಚು ಹರಿಸಿದವರು ;ಕೇದಾರ್‌ ಜಾಧವ್‌ ನಂ.1 ಆಲ್‌ರೌಂಡರ್‌

Team Udayavani, May 28, 2019, 6:00 AM IST

VA

ಈ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಅತ್ಯಧಿಕ ರನ್‌ ಬಾರಿಸುವ ಬ್ಯಾಟ್ಸ್‌ಮನ್‌ ಯಾರು, ಅತ್ಯಧಿಕ ವಿಕೆಟ್‌ ಯಾರಿಗೆ ಸಿಗಬಹುದು ಎಂಬ ಬಗ್ಗೆ ಈಗಾಗಲೇ ಚರ್ಚೆ ಹುಟ್ಟಿಕೊಂಡಿದೆ. ಇಲ್ಲಿ ನಿರ್ದಿಷ್ಟ ಆಟಗಾರರನ್ನು ಹೆಸರಿಸುವುದು ಭಾರೀ ಸವಾಲಿನ ಸಂಗತಿ. ಆದರೆ 2015 ವಿಶ್ವಕಪ್‌ ಬಳಿಕ ಪ್ರಚಂಡ ಫಾರ್ಮ್ ಕಾಯ್ದುಕೊಂಡು ಬಂದ ಆಟಗಾರರತ್ತ ಒಂದು ನೋಟ ಹಾಯಿಸಿದರೆ ಇದಕ್ಕೆ ಸಮಾಧಾನಕರ ಉತ್ತರವನ್ನು ಕಂಡುಕೊಳ್ಳಬಹುದು.

ಆಗ ಮೂಡಿಬರುವ ಹೆಸರುಗಳೆಂದರೆ ವಿರಾಟ್‌ ಕೊಹ್ಲಿ, ಟ್ರೆಂಟ್‌ ಬೌಲ್ಟ್ ಮತ್ತು ಆದಿಲ್‌ ರಶೀದ್‌. ಇವರು ಕ್ರಮವಾಗಿ ಬ್ಯಾಟಿಂಗ್‌, ವೇಗದ ಬೌಲಿಂಗ್‌ ಮತ್ತು ಸ್ಪಿನ್‌ ಬೌಲಿಂಗ್‌ ವಿಭಾಗಗಳಲ್ಲಿ ಉತ್ತಮ ನಿರ್ವಹಣೆ ಕಾಯ್ದುಕೊಂಡು ಬಂದಿದ್ದಾರೆ. ಉತ್ತಮ ಆಲ್‌ರೌಂಡರ್‌ ಎಂಬ ಹೆಗ್ಗಳಿಕೆ ಕೇದಾರ್‌ ಜಾಧವ್‌ ಅವರದು. ಈ ವಿಶ್ವಕಪ್‌ನಲ್ಲಿ ಇದೇ ಫಾರ್ಮ್ ಉಳಿಸಿಕೊಂಡು ಮಿಂಚುವ ಭರವಸೆ ಮೂಡಿಸಿದ್ದಾರೆ.

ವಿರಾಟ್‌ ಕೊಹ್ಲಿ ಸಾಧನೆ
ಕೊಹ್ಲಿ 69 ಏಕದಿನ ಪಂದ್ಯಗಳಲ್ಲಿ 4,306 ರನ್‌ ಪೇರಿಸಿದ್ದಾರೆ. 19 ಶತಕ, 16 ಅರ್ಧ ಶತಕ ಕೊಹ್ಲಿ ಬ್ಯಾಟಿಂಗ್‌ ಪರಾಕ್ರಮಕ್ಕೆ ಸಾಕ್ಷಿ. ರನ್‌ ಗಳಿಕೆಯಲ್ಲಿ ಕೊಹ್ಲಿಯ ಹಿಂದೇ ಇರುವ ಆಟಗಾರನೆಂದರೆ ರೋಹಿತ್‌ ಶರ್ಮ ಅವರು

ಟ್ರೆಂಟ್‌ ಬೌಲ್ಟ್
54 ಪಂದ್ಯ, 107 ವಿಕೆಟ್‌, 24.59 ಸರಾಸರಿ ವೇಗದ ಬೌಲಿಂಗ್‌ ವಿಭಾಗದಲ್ಲಿ ಟ್ರೆಂಟ್‌ ಬೌಲ್ಟ್ ಮತ್ತು ಕಾಗಿಸೊ ರಬಾಡ ಅವರದು ಸಮಬಲದ ಸಾಧನೆ. ಇವರಿಬ್ಬರು ಕ್ರಮವಾಗಿ 107 ಮತ್ತು 106 ವಿಕೆಟ್‌ ಉರುಳಿಸಿ 3ನೇ ಹಾಗೂ 4ನೇ ಸ್ಥಾನದಲ್ಲಿದ್ದಾರೆ. ಬೌಲ್ಟ್ 54 ಪಂದ್ಯ ಆಡಿದರೆ, ರಬಾಡ 66 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟಾಪ್‌-10 ಯಾದಿಯಲ್ಲಿರುವ ನ್ಯೂಜಿಲ್ಯಾಂಡಿನ ಏಕೈಕ ಬೌಲರ್‌ ಎಂಬುದು ಬೌಲ್ಟ್ ಹೆಗ್ಗಳಿಕೆ.

ಆದಿಲ್‌ ರಶೀದ್‌
83 ಪಂದ್ಯ, 129 ವಿಕೆಟ್‌, 29.68 ಸರಾಸರಿ
ಕಳೆದ 4 ವರ್ಷಗಳಲ್ಲಿ ಬೌಲಿಂಗ್‌ ಯಶಸ್ಸು ಕಂಡವರಲ್ಲಿ ಸ್ಪಿನ್ನರ್‌ಗಳೇ ಅಗ್ರಸ್ಥಾ ನದಲ್ಲಿರುವುದು ಗಮನಾರ್ಹ. ಇಲ್ಲಿ ಇಂಗ್ಲೆಂಡಿನ ಆದಿಲ್‌ ರಶೀದ್‌ ಮತ್ತು ಅಫ್ಘಾನಿಸ್ಥಾನ ರಶೀದ್‌ ಖಾನ್‌ ನಡುವೆ ಉತ್ತಮ ಪೈಪೋಟಿ ಕಂಡುಬಂದಿದೆ. ಆದಿಲ್‌ ರಶೀದ್‌ 83 ಪಂದ್ಯಗಳಿಂದ 129 ವಿಕೆಟ್‌ ಉರುಳಿಸಿದರೆ, ರಶೀದ್‌ ಖಾನ್‌ 59 ಪಂದ್ಯಗಳನ್ನಾಡಿ 125 ವಿಕೆಟ್‌ ಸಂಪಾದಿಸಿದ್ದಾರೆ.

ಟಾಪ್‌-10ರಲ್ಲಿರುವ ಇತರ ಬೌಲರ್‌ಗಳೆಂದರೆ ಇಮ್ರಾನ್‌ ತಾಹಿರ್‌, ಕುದೀಪ್‌ ಯಾದವ್‌, ಬುಮ್ರಾ, ಲಿಯಮ್‌ ಪ್ಲಂಕೆಟ್‌, ಮುಸ್ತಫಿಜುರ್‌ ರೆಹಮಾನ್‌, ಹಸನ್‌ ಅಲಿ.

71 ಪಂದ್ಯಗಳಿಂದ 3,790 ರನ್‌ ರಾಶಿ ಹಾಕಿದ್ದಾರೆ. ಸಿಡಿಸಿದ್ದು 15 ಶತಕ ಹಾಗೂ 16 ಅರ್ಧ ಶತಕ. ಸಾರಸರಿ 61.72.ಟಾಪ್‌-10 ಯಾದಿಯಲ್ಲಿರುವ ಉಳಿದ ಬ್ಯಾಟ್ಸ್‌ ಮನ್‌ ಗಳೆಂದರೆ ಜೋ ರೂಟ್‌, ಇಯಾನ್‌ ಮಾರ್ಗನ್‌, ಕ್ವಿಂಟನ್‌ ಡಿ ಕಾಕ್‌, ಜಾಸನ್‌ ರಾಯ್‌, ರಾಸ್‌ ಟೇಲರ್‌, ಕೇನ್‌ ವಿಲಿಯಮ್ಸನ್‌, ಶಿಖರ್‌ ಧವನ್‌ ಮತ್ತು ಫಾ ಡು ಪ್ಲೆಸಿಸ್‌.

ಕೇದಾರ್‌ ಜಾಧವ್‌
58 ಪಂದ್ಯ, 1,154 ರನ್‌, 27 ವಿಕೆಟ್‌
ಆಲ್‌ರೌಂಡ್‌ ಸಾಧಕರಲ್ಲಿ ಭಾರತದ ಕೇದಾರ್‌ ಜಾಧವ್‌ ಮುಂಚೂಣಿಯಲ್ಲಿ ದ್ದಾರೆ. 58 ಪಂದ್ಯ ಗಳಿಂದ 1,154 ರನ್‌ ಹಾಗೂ 27 ವಿಕೆಟ್‌ ಸಂಪಾದಿಸಿದ್ದು ಇವರ ಸಾಧನೆ. ಟಾಪ್‌-10 ಯಾದಿಯಲ್ಲಿರುವ ಉಳಿದ ಆಲ್‌ರೌಂಡರ್‌ಗಳೆಂದರೆ ರಶೀದ್‌ ಖಾನ್‌, ಕ್ರಿಸ್‌ ವೋಕ್ಸ್‌, ದೌಲತ್‌ ಜದ್ರಾನ್‌, ಶಕಿಬ್‌ ಅಲ್‌ ಹಸನ್‌, ಆ್ಯಂಡಿಲ್‌ ಫೆಲುಕ್ವಾಯೊ, ಮೊಹಮ್ಮದ್‌ ನಬಿ, ಶಾದಾಬ್‌ ಖಾನ್‌, ಬೆನ್‌ ಸ್ಟೋಕ್ಸ್‌, ಜಿಮ್ಮಿ ನೀಶಮ್‌.

ಟಾಪ್ ನ್ಯೂಸ್

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.