ಸ್ಫೋಟಕ ವಿಂಡೀಸ್‌ಗೆ ಪಾಕ್ ಸವಾಲು
ಸ್ಫೋಟಕ ಬ್ಯಾಟಿಂಗ್ ಪಡೆ ಹೊಂದಿದ ವಿಂಡೀಸ್; ಪಾಕಿಸ್ಥಾನ ಆಟಗಾರರಲ್ಲಿ ಸ್ಥಿರತೆಯ ಕೊರತೆ
Team Udayavani, May 31, 2019, 6:00 AM IST
ಲಂಡನ್: ಬ್ರಿಸ್ಟಲ್ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 421 ರನ್ನುಗಳ ಬೃಹತ್ ಮೊತ್ತ ಗಳಿಸಿದ ವೆಸ್ಟ್ ಇಂಡೀಸ್ ತಂಡವು ವಿಶ್ವಕಪ್ ಕೂಟದ ತನ್ನ ಮೊದಲ ಪಂದ್ಯದಲ್ಲಿ ಶುಕ್ರವಾರ ಪಾಕಿಸ್ಥಾನ ವಿರುದ್ಧ ನಾಟಿಂಗಂನಲ್ಲಿ ಹೋರಾಡಲಿದೆ. ಇತ್ತಂಡಗಳು ಬಲಿಷ್ಠವಾಗಿದ್ದು ಬೃಹತ್ ಮೊತ್ತ ಪೇರಿಸುವಲ್ಲಿ ಅನುಮಾನವಿಲ್ಲ.
ವಿಂಡೀಸ್ ಇತಿಹಾಸ
ಇಂಗ್ಲೆಂಡ್‌ನಲ್ಲಿ ನಡೆದ 1975ರ ಆರಂಭಿಕ ವಿಶ್ವಕಪ್ ಮತ್ತು 1979ರ ವಿಶ್ವಕಪ್‌ನಲ್ಲಿ ಸತತ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿ ಇತಿಹಾಸ ನಿರ್ಮಿಸಿದ ವಿಂಡೀಸ್ 1983ರಲ್ಲಿ ಮೂರನೇ ಬಾರಿ ಫೈನಲ್ ತಲುಪಿ ಭಾರತದ ವಿರುದ್ಧ ಸೋಲನುಭವಿಸಿತ್ತು. ಆಬಳಿಕ ವಿಂಡೀಸ್ ವಿಶ್ವಕಪ್ ಸಹಿತ ಉಭಯ ರಾಷ್ಟ್ರಗಳ ಸರಣಿಯಲ್ಲಿ ನೀರಸವಾಗಿ ಆಡತೊಡಗಿತು. ಇದು 2015ರ ವಿಶ್ವಕಪ್ ತನಕವೂ ಮುಂದುವರಿದಿದ್ದು ದುರದೃಷ್ಟಕರ ಸಂಗತಿಯಾಗಿದೆ.
ಗೇಲ್‌ಗಾಗಿ ಹೋರಾಟ
ಆದರೆ ಈ ಬಾರಿ ಹೇಗಾದರೂ ಮಾಡಿ ಕಪ್ ಗೆಲ್ಲಲೇ ಬೇಕು ಎಂದು ಪಣ ತೊಟ್ಟಿರುವ ವಿಂಡೀಸ್ ತಮ್ಮ ಸ್ಫೋಟಕ ಬ್ಯಾಟ್ಸ್‌ಮೆನ್‌ಗಳ ನೆರವಿನಿಂದ ಎದುರಾಳಿಗಳನ್ನು ಮಣಿಸುವ ಸಾಮರ್ಥ್ಯ, ವಿಶ್ವಾಸ ಹೊಂದಿದೆ. ವಿಶ್ವಕಪ್ ಗೆಲ್ಲುವ ಮೂಲಕ ‘ಯುನಿವರ್ಸ್ ಬಾಸ್’ ಗೇಲ್ಗೆ ಗೆಲುವಿನ ವಿದಾಯ ಹೇಳಲು ತಂಡದ ಆಟಗಾರರು ಪಣತೊಟ್ಟಿರುವುದೂ ವಿಶೇಷವಾಗಿದೆ. ವೆಸ್ಟ್ ಇಂಡೀಸ್ ತಂಡ ಬಲಿಷ್ಠವಾಗಿದ್ದು ಆರಂಭಿಕರಿಂದ ಹಿಡಿದು 9ನೇ ಕ್ರಮಾಂಕದವರೆಗೂ ಪ್ರತಿಯೊಬ್ಬ ಆಟಗಾರರೂ ಆಕ್ರಮಣಕಾರಿ ಆಟವಾಡುವಲ್ಲಿ ಸಮರ್ಥರಾಗಿದ್ದಾರೆ. ಇದಕ್ಕೆ ನ್ಯೂಜಿಲ್ಯಾಂಡ್ ವಿರುದ್ಧದ ಅಭ್ಯಾಸ ಪಂದ್ಯವೇ ಸಾಕ್ಷಿ. ಪಾಕ್ ವಿರುದ್ಧವೂ ಮತ್ತೂಮ್ಮೆ ಬೃಹತ್ ರನ್ ಪೇರಿಸುವರೇ ಎಂದು ಅಭಿಮಾನಿಗಳಲ್ಲಿ ಕಾತರ ಹೆಚ್ಚಾಗಿದೆ.
ಟಿ20 ಸ್ಪೆಶಲಿಸ್ಟ್
ತಂಡದಲ್ಲಿ ಟಿ20 ಸ್ಪೆಶಲಿಸ್ಟ್‌ಗಳೇ ಹೆಚ್ಚಾಗಿದ್ದಾರೆ. ಐಪಿಎಲ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಕ್ರೀಸ್ ಗೇಲ್, ಆಂಡ್ರ್ಯೂ ರಸೆಲ್, ಬ್ರಾತ್‌ವೇಟ್, ನಿಕೋಲಾಸ್ ಪೂರನ್, ಹೆಟ್ ಮೈಯರ್ ಸ್ಫೋಟಕ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಇವರನ್ನು ನಂಬಿ ಮುನ್ನಡೆದರೆ ಕೆಡುವ ಅಪಾಯವೂ ವಿಂಡೀಸ್ ತಂಡಕ್ಕಿದೆ. ಬ್ಯಾಟಿಂಗ್ ಕುಸಿತ ಕಂಡರೆ ತೀರ ಕಳಪೆ ಪ್ರದರ್ಶನ ತೋರುವ ಮೂಲಕ 100 ರನ್ ಒಳಗಡೆ ಆಲೌಟ್ ಆದ ಎಷ್ಟೋ ದೃಷ್ಟಾಂತಗಳಿವೆ. ಆದ್ದರಿಂದ ವಿಂಡೀಸ್ ಆಟಗಾರರ ಮೇಲೆ ಹೆಚ್ಚಿನ ಭರವಸೆಯನ್ನು ಇಡುವಂತಿಲ್ಲ.
ಸಂಭಾವ್ಯ ತಂಡ
ವೆಸ್ಟ್ ಇಂಡೀಸ್: ಜಾಸನ್ ಹೋಲ್ಡರ್ (ನಾಯಕ), ಕ್ರಿಸ್ ಗೇಲ್, ಎವಿನ್ ಲೆವಿಸ್, ಶೈ ಹೋಪ್, ಡ್ಯಾರನ್ ಬ್ರಾವೊ, ಆಂಡ್ರೆ ರಸೆಲ್, ನಿಕೋಲಸ್ ಪೂರನ್, ಕಾರ್ಲೋಸ್ ಬ್ರಾತ್‌ವೇಟ್, ಕೆಮರ್ ರೋಶ್, ಆಶೆÉ ನರ್ಸ್, ಫ್ಯಾಬಿಯನ್ ಅಲೆನ್.
ಪಾಕಿಸ್ಥಾನ: ಸಫìರಾಜ್ ಖಾನ್ (ನಾಯಕ), ಫಕಾರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಅಜಮ್, ಶೋಯಿಬ್ ಮಲ್ಲಿಕ್, ಮೊಹಮ್ಮದ್ ಹಫೀಜ್, ಇಮಮ್ ವಾಸಿಮ್, ಹಸನ್ ಅಲಿ, ಮೊಹಮ್ಮದ್ ಹಸ್ನೇನ್, ಆಸಿಫ್ ಅಲಿ, ಮೊಹಮ್ಮದ್ ಆಮಿರ್.
ಸ್ಥಳ: ನಾಟಿಂಗಂ
ಆರಂಭ: 3.00
ಪ್ರಸಾರ: ಸ್ಟಾರ್ ನ್ಪೋರ್ಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.