ಕೆಂಪು ಜೆರ್ಸಿ ಧರಿಸಲಿದ್ದಾರೆ ಬಾಂಗ್ಲಾ ಕ್ರಿಕೆಟಿಗರು!
Team Udayavani, May 27, 2019, 6:00 AM IST
ಲಂಡನ್: ಈ ಬಾರಿಯ ವಿಶ್ವಕಪ್ ಹೆಚ್ಚು ರಂಗುರಂಗಾಗಿ ಕಣ್ತಣಿಸಲಿದೆ. ಕಾರಣ ಆತಿಥೇಯ ರಾಷ್ಟ್ರವೊಂದನ್ನು ಹೊರತುಪಡಿಸಿ ಉಳಿದ ಬಹುತೇಕ ತಂಡಗಳು ಎರಡು ವಿಭಿನ್ನ ಜೆರ್ಸಿಗಳನ್ನು ತೊಡಲಿವೆ. ಇದರಂತೆ ಬಾಂಗ್ಲಾದೇಶ ತನ್ನ ಹಸಿರು ಬಣ್ಣದ ಖಾಯಂ ಜೆರ್ಸಿಯ ಜತೆಗೆ ಕೆಂಪು ಬಣ್ಣದ ಜೆರ್ಸಿಯೊಂದನ್ನು ಧರಿಸಲಿದೆ. ಇದನ್ನು ಕಳೆದ ರಾತ್ರಿ ಅನಾವರಣಗೊಳಿಸಲಾಯಿತು.
ವಿಶ್ವಕಪ್‌ನಲ್ಲಿ ಭಾಗವ ಹಿಸುವುದು ಹತ್ತೇ ತಂಡಗ ಳಾದರೂ ಕೆಲವು ತಂಡ ಗಳು ಒಂದೇ ಬಣ್ಣದ ಜೆರ್ಸಿಗಳನ್ನು ಹೊಂದಿ ವೆ. ಉದಾಹರಣೆಗೆ ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ತಂಡದ ಉಡುಗೆ ಹಸಿರು ಬಣ್ಣದಿಂದ ಕೂಡಿದೆ. ಇದರಿಂದ ಈ ತಂಡಗಳು ಪರಸ್ಪರ ಎದುರಾದಾಗ ಗೊಂದಲ ಉಂಟಾಗುವುದು ಸಹಜ.
ಹೀಗಾಗಿ ಇಂಥ ಸಂದರ್ಭದಲ್ಲಿ ತಂಡವೊಂದು ಬೇರೆ ಬಣ್ಣದ ಜೆರ್ಸಿ ತೊಡಬೇಕು ಎಂಬ ನಿಯಮವನ್ನು ಐಸಿಸಿ ಜಾರಿಗೊಳಿಸಿದೆ. ಇದು ಕೇವಲ ಐಸಿಸಿ ಪಂದ್ಯಾವಳಿ ಗಷ್ಟೇ ಅನ್ವಯವಾಗುವ ನಿಯಮ. ಅಧಿಕೃತ ಪ್ರಸಾರ ಸಂಸ್ಥೆಗಳ ಕೋರಿಕೆಯಂತೆ ಐಸಿಸಿ ಇಂಥದೊಂದು ನಿಯಮ ರೂಪಿಸಿದೆ.
ಇಂಥ ಪಂದ್ಯಗಳ ವೇಳೆ ಯಾವ ತಂಡ ಯಾವ ಬಣ್ಣದ ಜೆರ್ಸಿ ಧರಿಸ ಬೇಕು ಎಂಬುದನ್ನು ಐಸಿಸಿ ಮುಂದಾಗಿ ತಿಳಿಸಲಿದೆ. ಆತಿಥೇಯ ಇಂಗ್ಲೆಂಡ್, ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್ ಆಟಗಾರರಿಗೆ ಹೆಚ್ಚುವರಿ ಜೆರ್ಸಿಯ ಅಗತ್ಯವಿಲ್ಲ.
ಭಾರತಕ್ಕೂ ಆಸಕ್ತಿ
ಮಾಧ್ಯಮಗಳ ವರದಿ ಪ್ರಕಾರ ಭಾರತ ಕೂಡ ಬದಲಿ ಜೆರ್ಸಿ ಬಗ್ಗೆ ಆಸಕ್ತಿ ವಹಿಸಿದೆ. ಇದು ಕಿತ್ತಳೆ ಬಣ್ಣವನ್ನು ಹೊಂದಿರಲಿದೆ. ಶ್ರೀಲಂಕಾ ಮತ್ತು ಅಫ್ಘಾನಿಸ್ಥಾನ ವಿರುದ್ಧ ಆಡುವಾಗ ಇದು ನೆರವಿಗೆ ಬರಲಿದೆ. ಕಾರಣ, ಈ ಮೂರೂ ತಂಡಗಳು ನೀಲಿ ಬಣ್ಣದ ಜೆರ್ಸಿಗಳನ್ನೇ ಹೊಂದಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.