ವಿಂಡೀಸ್ “ಸೈನಿಕ’ನಿಗೆ ಶಮಿ ಸೆಲ್ಯೂಟ್!
ವೆಸ್ಟ್ ಇಂಡೀಸಿನ ವೇಗಿ ಶೆಲ್ಡನ್ ಕಾಟ್ರೆಲ್
Team Udayavani, Jun 29, 2019, 9:43 AM IST
ಕಾಟ್ರೆಲ್ ಈ ಕೂಟದ ಆಕರ್ಷಣೆಯಲ್ಲಿ ಒಬ್ಬರಾಗಿದ್ದರು. ಪ್ರತೀ ವಿಕೆಟ್ ಕಿತ್ತ ಬಳಿಕ ಇವರು ಸೈನಿಕನ ಶಿಸ್ತಿನಲ್ಲಿ ಸೆಲ್ಯೂಟ್ ಹೊಡೆಯುತ್ತಿದ್ದುದೇ ಇದಕ್ಕೆ ಕಾರಣ (ಮಾರ್ಚ್ ಆ್ಯಂಡ್ ಸೆಲ್ಯೂಟ್). ವೃತ್ತಿಯಲ್ಲಿ ಕಾಟ್ರೆಲ್ ಸೈನಿಕ ನಾಗಿರುವುದರಿಂದ ಅದೇ ಶಿಸ್ತನ್ನು ಕ್ರಿಕೆಟ್ ಅಂಗಳದಲ್ಲೂ ಪಾಲಿಸಿಕೊಂಡು ಬಂದಿದ್ದರು. ಭಾರತ-ವೆಸ್ಟ್ ಇಂಡೀಸ್ ಪಂದ್ಯದ ವೇಳೆಯೂ ಈ ಸೆಲ್ಯೂಟ್ ಪ್ರದರ್ಶನ ಮುಂದುವರಿದಿತ್ತು.
ಕೊನೆಯಲ್ಲಿ ಭಾರತದ ಯಶಸ್ವಿ ಬೌಲರ್ ಮೊಹಮ್ಮದ್ ಶಮಿ ಇದೇ ಸೆಲ್ಯೂಟ್ ಮೂಲಕ ಸುದ್ದಿಯಾದದ್ದು ಈ ಪಂದ್ಯದ ತಮಾಷೆಯ ಕ್ಷಣವಾಗಿ ದಾಖಲಾಗಿದೆ. 10ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಕಾಟ್ರೆಲ್ 10 ರನ್ ಮಾಡಿ (1 ಬೌಂಡರಿ, 1 ಸಿಕ್ಸರ್) ಚಹಲ್ ಎಸೆತದಲ್ಲಿ ಲೆಗ್ ಬಿಫೋರ್ ಬಲೆಗೆ ಬಿದ್ದರು. ಅವರು ಪೆವಿಲಿಯನ್‌ನತ್ತ ಸಾಗುತ್ತಿದ್ದಾಗ ಮೊಹಮ್ಮದ್ ಶಮಿ, ಕಾಟ್ರೆಲ್ ರೀತಿಯಲ್ಲೇ ನಗುತ್ತ ಸೆಲ್ಯೂಟ್ ಮಾಡಿ ನಗು ಉಕ್ಕಿಸಿದರು.
ಕಾಟ್ರೆಲ್ ಉರುಳಿಸಿದ 2 ವಿಕೆಟ್‌ಗಳಲ್ಲಿ ಶಮಿ ವಿಕೆಟ್ ಕೂಡ ಸೇರಿತ್ತು. ಆಗಲೂ ಕಾಟ್ರೆಲ್ ಸೆಲ್ಯೂಟ್ ಹೊಡೆದಿದ್ದರು. ಕೊನೆಯಲ್ಲಿ ಶಮಿ ಇದಕ್ಕೆ “ಸೇಡು’ ತೀರಿಸಿಕೊಂಡರು, ಅಷ್ಟೇ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.