ಹರಿಣಗಳಿಗೆ ಸಮಾಧಾನಕರ ಜಯ : ಲಂಕೆಯ ನಾಕೌಟ್‌ ಹಾದಿ ಕಠಿಣ


Team Udayavani, Jun 29, 2019, 8:57 AM IST

sa

ಚೆಸ್ಟರ್‌ ಲೀ ಸ್ಟ್ರೀಟ್‌: ಈಗಾಗಲೇ ವಿಶ್ವಕಪ್‌ನಿಂದ ಹೊರಬಿದ್ದ ದಕ್ಷಿಣ ಆಫ್ರಿಕಾ ಶುಕ್ರವಾರದ ತನ್ನ ಔಪಚಾರಿಕ ಪಂದ್ಯದಲ್ಲಿ ಶ್ರೀಲಂಕಾ ಮೇಲೆರಗಿ ಸಮಾಧಾನಕರ ಗೆಲುವು ದಾಖಲಿಸಿದೆ. ಇದರಿಂದ ಲಂಕೆಯ ನಾಕೌಟ್‌ ಹಾದಿ ಕಠಿಣಗೊಂಡಿದೆ.

ಹರಿಣಗಳ ವೇಗದ ದಾಳಿಗೆ ಬೆದರಿದ ಶ್ರೀಲಂಕಾ 49.3 ಓವರ್‌ಗಳಲ್ಲಿ 203 ರನ್ನುಗಳಿಗೆ ಆಲೌಟ್‌ ಆಯಿತು. ಇದರಲ್ಲಿ 20 ರನ್‌ ಎಕ್ಸ್‌ಟ್ರಾ ರೂಪದಲ್ಲಿ ಬಂದಿತ್ತು. ಜವಾಬಿತ್ತ ದಕ್ಷಿಣ ಆಫ್ರಿಕಾ 37.2 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 206 ರನ್‌ ಬಾರಿಸಿತು. ಆಗ ಹಾಶಿಮ್‌ ಆಮ್ಲ 80 ರನ್‌ (105 ಎಸೆತ, 5 ಬೌಂಡರಿ) ಮತ್ತು ನಾಯಕ ಡು ಪ್ಲೆಸಿಸ್‌ 96 ರನ್‌ ಮಾಡಿ (10 ಬೌಂಡರಿ, 1 ಸಿಕ್ಸರ್‌) ಅಜೇಯರಾಗಿದ್ದರು. ಈ ಜೋಡಿಯಿಂದ 2ನೇ ವಿಕೆಟಿಗೆ 175 ರನ್‌ ಒಟ್ಟುಗೂಡಿತು.

ಇದು 8 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಸಾಧಿಸಿದ ಕೇವಲ 2ನೇ ಗೆಲುವು. ಇನ್ನೊಂದೆಡೆ ಶ್ರೀಲಂಕಾ 7 ಪಂದ್ಯಗಳಲ್ಲಿ 3ನೇ ಸೋಲನುಭವಿಸಿತು. ಇದರಿಂದ ಲಂಕೆಯ ಅಂಕ ಆರಕ್ಕೆ ಸ್ಥಗಿತಗೊಂಡಿದೆ. ಉಳಿದೆರಡೂ ಪಂದ್ಯಗಳನ್ನು ಭಾರೀ ಅಂತರದಿಂದ ಗೆದ್ದು, ಮೇಲಿನ ಕೆಲವು ತಂಡಗಳು ಸೋತರಷ್ಟೇ ಕರುಣರತ್ನೆ ಪಡೆ ಸೆಮಿಫೈನಲ್‌ ಪ್ರವೇಶಿಸೀತು.

ಆಫ್ರಿಕಾ ವೇಗಿಗಳ ದಾಳಿ
ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ದುಕೊಂಡ ದಕ್ಷಿಣ ಆಫ್ರಿಕಾ ಇದರ ಭರಪೂರ ಲಾಭವೆತ್ತಿತು. ವೇಗಿಗಳಾದ ಡ್ವೇನ್‌ ಪ್ರಿಟೋರಿಯಸ್‌, ಕ್ರಿಸ್‌ ಮಾರಿಸ್‌ ಮತ್ತು ಕಾಗಿಸೊ ರಬಾಡ ಸೇರಿಕೊಂಡು ಶ್ರೀಲಂಕಾ ಬ್ಯಾಟಿಂಗ್‌ ಸರದಿಯ ಮೇಲೆ ಘಾತಕವಾಗಿ ಎರಗಿದರು. ಮಾರಿಸ್‌, ಪ್ರಿಟೋರಿಯಸ್‌ ತಲಾ 3, ರಬಾಡ 2 ವಿಕೆಟ್‌ ಹಾರಿಸಿದರು.

ಮೊದಲ ಎಸೆತಕ್ಕೇ ನಾಯಕ ಔಟ್‌!
ನಾಯಕ ದಿಮುತ್‌ ಕರುಣರತ್ನೆ ಪಂದ್ಯದ ಮೊದಲ ಎಸೆತದಲ್ಲೇ ಔಟಾಗಿ ಲಂಕಾ ತಂಡದ ವೈಫ‌ಲ್ಯಕ್ಕೆ ದಾರಿ ಮಾಡಿಕೊಟ್ಟರು. ರಬಾಡ ಎಸೆತವನ್ನು ಅವರು ಎದುರಾಳಿ ನಾಯಕ ಡು ಪ್ಲೆಸಿಸ್‌ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು.

ಕುಸಲ್‌ ಪೆರೆರ-ಆವಿಷ್ಕ ಫೆರ್ನಾಂಡೊ 67 ರನ್‌ ಒಟ್ಟುಗೂಡಿಸಿ ತಂಡವನ್ನು ಮೇಲೆತ್ತಿದರು. ಆದರೆ ಇವರಿಬ್ಬರನ್ನೂ ಎಡಗೈ ವೇಗಿ ಪ್ರಿಟೋರಿಯಸ್‌ ಸತತ ಓವರ್‌ಗಳಲ್ಲಿ ಔಟ್‌ ಮಾಡುವುದರೊಂದಿಗೆ ಲಂಕಾ ಮತ್ತೆ ಹಳಿ ತಪ್ಪಿತು. ಪೆರೆರ ಮತ್ತು ಫೆರ್ನಾಂಡೊ ಅವರ 30 ರನ್ನೇ ಲಂಕಾ ಸರದಿಯ ಗರಿಷ್ಠ ವೈಯಕ್ತಿಕ ಗಳಿಕೆ ಎನಿಸಿತು.

ಜೇನ್ನೊಣಗಳ ದಾಳಿಯಿಂದ ನಿಂತ ಪಂದ್ಯ !
ಈ ಸಲದ ವಿಶ್ವಕಪ್‌ ಕೂಟದ ಹಲವು ಪಂದ್ಯಗಳು ಮಳೆಯಿಂದ ರದ್ದುಗೊಂಡಿವೆ ಇಲ್ಲವೇ ಬಾಧಿತವಾಗಿವೆ. ಆದರೆ ಚೆಸ್ಟರ್‌ ಲೀ ಸ್ಟ್ರೀಟ್‌ನಲ್ಲಿ ನಡೆದ ಶ್ರೀಲಂಕಾ-ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವನ್ನು ನಿಲ್ಲಿಸಿದ್ದು ಮಾತ್ರ ಜೇನ್ನೊಣಗಳು!

ಶ್ರೀಲಂಕಾ ಬ್ಯಾಟಿಂಗ್‌ ವೇಳೆ 48ನೇ ಓವರ್‌ನ ಕೊನೆಯ ಎಸೆತ ಎಸೆಯುವಾಗ ಮೈದಾನಕ್ಕೆ ಜೇನ್ನೊಣಗಳು ನುಗ್ಗಿ ಬಂದವು. ಅವುಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿ ಆಟಗಾರರು ಮತ್ತು ಅಂಪಾಯರುಗಳು ಮೈದಾನದಲ್ಲೇ ಕೈಗಳಿಂದ ಮುಖಮುಚ್ಚಿಕೊಂಡು ಮಲಗಿದರು. ಜೇನ್ನೊಣಗಳು ನಿರ್ಗಮಿಸಿದ ಬಳಿಕವೇ ಅವರು ಎದ್ದದ್ದು. ಇದರಿಂದ ಕೆಲವು ನಿಮಿಷಗಳ ಕಾಲ ಪಂದ್ಯ ಸ್ಥಗಿತಗೊಂಡಿತು.
ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಈ ವೀಡಿಯೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದೆ.

ಸ್ಕೋರ್‌ ಪಟ್ಟಿ
ಶ್ರೀಲಂಕಾ

ದಿಮುತ್‌ ಕರುಣರತ್ನೆ ಸಿ ಡು ಪ್ಲೆಸಿಸ್‌ ಬಿ ರಬಾಡ 0
ಕುಸಲ್‌ ಪೆರೆರ ಬಿ ಪ್ರಿಟೋರಿಯಸ್‌ 30
ಆವಿಷ್ಕ ಫೆರ್ನಾಂಡೊ ಸಿ ಡು ಪ್ಲೆಸಿಸ್‌ ಬಿ ಪ್ರಿಟೋರಿಯಸ್‌ 30
ಕುಸಲ್‌ ಮೆಂಡಿಸ್‌ ಸಿ ಮಾರಿಸ್‌ ಬಿ ಪ್ರಿಟೋರಿಯಸ್‌ 23
ಏಂಜೆಲೊ ಮ್ಯಾಥ್ಯೂಸ್‌ ಬಿ ಮಾರಿಸ್‌ 11
ಧನಂಜಯ ಡಿ ಸಿಲ್ವ ಬಿ ಡ್ಯುಮಿನಿ 24
ಜೀವನ್‌ ಮೆಂಡಿಸ್‌ ಸಿ ಪ್ರಿಟೋರಿಯಸ್‌ ಬಿ ಮಾರಿಸ್‌ 18
ತಿಸರ ಪೆರೆರ ಸಿ ರಬಾಡ ಬಿ ಫೆಲುಕ್ವಾಯೊ 21
ಇಸುರು ಉದಾನ ಸಿ ಮತ್ತು ಬಿ ರಬಾಡ 17
ಸುರಂಗ ಲಕ್ಮಲ್‌ ಔಟಾಗದೆ 5
ಲಸಿತ ಮಾಲಿಂಗ ಸಿ ಡು ಪ್ಲೆಸಿಸ್‌ ಬಿ ಮಾರಿಸ್‌ 4
ಇತರ 20
ಒಟ್ಟು (49.3 ಓವರ್‌ಗಳಲ್ಲಿ ಆಲೌಟ್‌) 203
ವಿಕೆಟ್‌ ಪತನ: 1-0, 2-67, 3-72, 4-100, 5-111, 6-135, 7-163, 8-184, 9-197.
ಬೌಲಿಂಗ್‌: ಕಾಗಿಸೊ ರಬಾಡ 10-2-36-2
ಕ್ರಿಸ್‌ ಮಾರಿಸ್‌ 9.3-0-46-3
ಡ್ವೇನ್‌ ಪ್ರಿಟೋರಿಯಸ್‌ 10-2-25-3
ಆ್ಯಂಡಿಲ್‌ ಫೆಲುಕ್ವಾಯೊ 8-0-38-1
ಇಮ್ರಾನ್‌ ತಾಹಿರ್‌ 10-0-36-0
ಜೆಪಿ ಡ್ಯುಮಿನಿ 2-0-15-1
ದಕ್ಷಿಣ ಆಫ್ರಿಕಾ
ಕ್ವಿಂಟನ್‌ ಡಿ ಕಾಕ್‌ ಬಿ ಮಾಲಿಂಗ 15
ಹಾಶಿಮ್‌ ಆಮ್ಲ ಔಟಾಗದೆ 80
ಫಾ ಡು ಪ್ಲೆಸಿಸ್‌ ಔಟಾಗದೆ 96
ಇತರ 15
ಒಟ್ಟು (37.2 ಓವರ್‌ಗಳಲ್ಲಿ ಒಂದು ವಿಕೆಟಿಗೆ) 206
ವಿಕೆಟ್‌ ಪತನ: 1-31.
ಬೌಲಿಂಗ್‌: ಲಸಿತ ಮಾಲಿಂಗ 10-1-47-1
ಧನಂಜಯ ಡಿ ಸಿಲ್ವ 4-0-18-0
ಸುರಂಗ ಲಕ್ಮಲ್‌ 6-0-47-0
ತಿಸರ ಪೆರೆರ 5.2-1-28-0
ಜೀವನ್‌ ಮೆಂಡಿಸ್‌ 7-0-36-0
ಇಸುರು ಉದಾನ 5-0-29-0
ಪಂದ್ಯಶ್ರೇಷ್ಠ: ಡ್ವೇನ್‌ ಪ್ರಿಟೋರಿಯಸ್‌

ಟಾಪ್ ನ್ಯೂಸ್

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Railway-Minister-MP-DK

Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.