ಭಾರತದ ವಿಶ್ವಕಪ್ ಜಯಭೇರಿ ಎಂಬ ಅಚ್ಚರಿ!
Team Udayavani, May 19, 2019, 6:00 AM IST
ಕ್ರಿಕೆಟ್‌ನಲ್ಲಿ ಎಲ್ಲವೂ ಸಂಭವಿಸುತ್ತದೆ. ಅಚ್ಚರಿ, ಅನಿರೀಕ್ಷಿತ, ಅದ್ಭುತ, ಪವಾಡ..
ಇವೆಲ್ಲವೂ ಏಕಕಾಲದಲ್ಲಿ ಘಟಿಸಿ ಜಾಗತಿಕ ಕ್ರಿಕೆಟಿನ ವ್ಯಾಖ್ಯಾನವನ್ನೇ ಬದಲಾಯಿಸುವಂತೆ ಮಾಡಿದ್ದು 1983ರ ಪ್ರುಡೆನ್ಶಿಯಲ್ ವಿಶ್ವಕಪ್. ಅಂದು ಯಾರೂ ನಿರೀಕ್ಷಿಸಿರದ, ಯಾರಿಂದಲೂ ಕಲ್ಪಿಸಲೂ ಆಗದ, ವಿಶ್ವ ಕ್ರೀಡಾ ವಲಯವನ್ನೇ ನಿಬ್ಬೆರಗುಗೊಳಿಸಿದ ವಿದ್ಯಮಾನವೊಂದು ಸಂಭವಿಸಿತ್ತು. ಕಪಿಲ್‌ದೇವ್ ಸಾರಥ್ಯದ ಭಾರತ ನೂತನ ವಿಶ್ವ ಚಾಂಪಿಯನ್ ಆಗಿ ಮೂಡಿಬಂದಿತ್ತು!
ಇಂಗ್ಲೆಂಡಿನಲ್ಲೇ ನಡೆದ ಈ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಹ್ಯಾಟ್ರಿಕ್ ಹಾದಿಯಲ್ಲಿತ್ತು. ಇದನ್ನು ಸಾಧಿಸುವ ಸುವರ್ಣಾವಕಾಶವೂ ಲಾಯ್ಡ ಪಡೆಯ ಮುಂದಿತ್ತು. ಆದರೆ ಭಾರತ ಲಾರ್ಡ್ಸ್ ಫೈನಲ್‌ನಲ್ಲಿ ಕೆರಿಬಿಯನ್ನರ ಹೆಡೆಮುರಿ ಕಟ್ಟಿ ಅದ್ಭುತವೊಂದನ್ನು ಸೃಷ್ಟಿಸಿತು. ಅಂದು ಭಾರತದ ಕೈಯಲ್ಲಿ ಏಟು ತಿಂದು ಮಲಗಿದ ವೆಸ್ಟ್ ಇಂಡೀಸ್ ಇನ್ನೂ ಮೇಲೆದ್ದಿಲ್ಲ ಎಂಬುದು ಕ್ರಿಕೆಟಿನ ದುರಂತವೂ ಹೌದು!
ಇದು ಕಪಿಲ್ ಡೆವಿಲ್ಸ್ ಕಾಲ
ಆಗ ವೆಂಕಟರಾಘವನ್ ಕಾಲ ಮುಗಿದಿತ್ತು. ಕಪಿಲ್‌ದೇವ್ ಸಾರಥ್ಯದಲ್ಲಿ ಹೊಸ ಹುರುಪಿನ, ಬಿಸಿರಕ್ತದ ಪಡೆಯೊಂದು ಎದ್ದು ನಿಂತಿತ್ತು. ಆದರೂ ಭಾರತದ ಮೇಲೆ ಯಾರಿಗೂ ನಂಬಿಕೆ ಇರಲಿಲ್ಲ. ನಮ್ಮ ಕ್ರಿಕೆಟಿಗರಂತೂ ಪಿಕ್‌ನಿಕ್‌ಗೆ ಹೊರಟವರಂತೆ ಇಂಗ್ಲೆಂಡ್ ವಿಮಾನ ಏರಿದ್ದರು.
ಹಿಂದಿನೆರಡು ಪಂದ್ಯಗಳ ಹೀನಾಯ ಪ್ರದರ್ಶನ, ಅದುವರೆಗೆ ಆಡಿದ 40 ಏಕದಿನ ಪಂದ್ಯಗಳಲ್ಲಿ ಸಾಧಿಸಿದ ಕೇವಲ 12 ಗೆಲುವು ಭಾರತದ ಸ್ಥಿತಿಯನ್ನು ಸಾರುತ್ತಿತ್ತು. ಸಾಧನೆಯ ಲೆಕ್ಕಾಚಾರದಲ್ಲಿ ಲಂಕೆಗಿಂತ ಸ್ವಲ್ಪ ಮೇಲಿತ್ತು, ಅಷ್ಟೇ.
ಆದರೆ ಭಾರತದ ಆಲ್‌ರೌಂಡ್ ಪಡೆಯ ಸಾಮರ್ಥ್ಯವನ್ನು ಒಬ್ಬರು ಸೂಕ್ಷ್ಮ ದೃಷ್ಟಿಯಲ್ಲಿ ಗುರು ತಿಸಿದ್ದರು. ಕಪಿಲ್ ಪಡೆಯನ್ನು ಯಾವ ಕಾರಣಕ್ಕೂ ಕಡೆಗಣಿಸಬೇಡಿ ಎಂದು ಎಚ್ಚರಿಸಿದ್ದರು. ಅದು ಆಸ್ಟ್ರೇಲಿಯ ತಂಡದ ನಾಯಕ ಕಿಮ್ ಹ್ಯೂಸ್!
ವಿಂಡೀಸಿಗೆ ಮೊದಲ ಸೋಲಿನೇಟು
ಭಾರತಕ್ಕೆ ಎದುರಾದ ಮೊದಲ ತಂಡವೇ 2 ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್! ಅಂದು ಜೂನ್ 9, ಸ್ಥಳ ಮ್ಯಾಂಚೆಸ್ಟರ್. ಇಲ್ಲಿಂದಲೇ ಕಪಿಲ್ ಪಡೆಯ ಪರಾಕ್ರಮ ಶುರು. ಫಲಿತಾಂಶ-ಭಾರತದ 34 ರನ್ ಜಯಭೇರಿ. ಲಾಯ್ಡ ಪಡೆಗೆ ಅರಗಿಸಿ ಕೊಳ್ಳಲಾಗದ ಆಘಾತ. ವಿಶ್ವಕಪ್ ಇತಿಹಾಸದಲ್ಲಿ ಅನುಭವಿಸಿದ ಮೊದಲ ಸೋಲು!
ಬಳಿಕ ಜಿಂಬಾಬ್ವೆಯನ್ನು ಸುಲಭದಲ್ಲಿ ಕೆಡವಿದ ಭಾರತ, ಆಸ್ಟ್ರೇಲಿಯಕ್ಕೆ ಶರಣಾಯಿತು.
ಸುಂಟರಗಾಳಿಯಾದ ಕಪಿಲ್
ಅದು 2 ಸುತ್ತುಗಳ ಲೀಗ್ ಹಣಾಹಣಿ. ವಿಂಡೀಸ್ ಸೇಡಿಗೆ ಕಾದು ಕುಳಿತಿತ್ತು. 66 ರನ್ನುಗಳಿಂದ ಗೆದ್ದು ಸಮಾಧಾನಪಟ್ಟಿತು. ಮುಂದಿನದು ಜಿಂಬಾಬ್ವೆ ಹರ್ಡಲ್ಸ್. 17 ರನ್ನಿಗೆ ಭಾರತದ 5 ವಿಕೆಟ್ ಢಮಾರ್! ಆಸ್ಟ್ರೇಲಿಯಕ್ಕೆ ಆಘಾತವಿಕ್ಕಿ ಬಂದಿದ್ದ ಜಿಂಬಾಬ್ವೆ ಭಾರತಕ್ಕೂ ಬಲೆ ಬೀಸೀತೇ ಎಂಬ ಆತಂಕ ಶುರುವಾಯಿತು. ಕಪಿಲ್ ವಿಚಲಿತರಾಗಲಿಲ್ಲ.
ಸುಂಟರಗಾಳಿಯಂಥ ಬೀಸುಗೆಯಲ್ಲಿ ಅಜೇಯ 175 ರನ್ ಸಿಡಿಸಿ (138 ಎಸೆತ, 16 ಬೌಂಡರಿ, 6 ಸಿಕ್ಸರ್) ಭಾರತವನ್ನು ಮೇಲೆತ್ತಿಯೇ ಬಿಟ್ಟರು. ಇದು ಭಾರತದ ಏಕದಿನ ಇತಿಹಾಸದ ಪ್ರಪ್ರಥಮ ಶತಕವಾಗಿತ್ತು, ಮತ್ತು ಆ ಕಾಲಕ್ಕೆ ವಿಶ್ವದಾಖಲೆಯ ಗೌರವ ಪಡೆದಿತ್ತು!
ಆಸ್ಟ್ರೇಲಿಯವನ್ನು 118 ರನ್ನುಗಳಿಂದ ಕೆಡವಿದ ಭಾರತಕ್ಕೆ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಎದುರಾಯಿತು. ಭಾರೀ ಜೋಶ್‌ನಲ್ಲಿದ್ದ ಕಪಿಲ್ ಪಡೆ ಸಿಂಹವನ್ನು ಅವರದೇ ಗುಹೆಯಲ್ಲಿ ಬೇಟೆಯಾಡಿತ್ತು.
ವೆಸ್ಟ್ ಇಂಡೀಸ್ ಪತನ!
ಫೈನಲ್‌ನಲ್ಲಿ ಮತ್ತೆ ವೆಸ್ಟ್ ಇಂಡೀಸ್ ಸವಾಲು. ಭಾರತ 183ಕ್ಕೆ ಕುಸಿದಾಗ ಎಲ್ಲರಲ್ಲೂ ಆತಂಕ. ಆದರೆ ವಿಂಡೀಸ್ ಕೂಡ ವಿಲವಿಲ ಒದ್ದಾಡತೊಡಗಿತು. ರಿಚರ್ಡ್ಸ್ ಕ್ಯಾಚ್ ಪಡೆದ ಕಪಿಲ್ ವಿಶ್ವಕಪ್ ಎತ್ತಿದಷ್ಟೇ ಸಂಭ್ರಮಿಸಿದರು. ಲಾಯ್ಡ ಪಡೆ 140ಕ್ಕೆ ಉದುರಿದಾಗ ಭಾರತೀಯ ಕ್ರಿಕೆಟ್‌ನಲ್ಲಿ ನೂತನ ಶಕೆಯೊಂದು ಆರಂಭವಾಗಿತ್ತು!
ಹ್ಯಾಟ್ರಿಕ್ ಪ್ರಶಸ್ತಿಯ ಹಾದಿಯಲ್ಲಿದ್ದ
ಲಾಯ್ಡ ಪಡೆ ಭಾರತದೆದುರು ಲಾಗ!
ರಾಜೀನಾಮೆ ನೀಡಿದ ಲಾಯ್ಡ !
ಭಾರತದೆದುರು ಸೋತ ಅವಮಾನವನ್ನು ತಾಳಲಾಗದೆ ಕ್ಲೈವ್ ಲಾಯ್ಡ ಕೂಡಲೇ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಘಟನೆಯೂ ಸಂಭವಿಸಿತು. ಆದರೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಇದನ್ನು ಸ್ವೀಕರಿಸಲಿಲ್ಲ. ಲಾಯ್ಡ ತಮ್ಮ ನಿರ್ಧಾರ ಬದಲಿಸಿದರು. ಫೈನಲ್ ಸೋಲನ್ನು ಲಾಯ್ಡ ಅವರಿಂದ ಸಹಿಸಿಕೊಳ್ಳಲಾಗಲಿಲ್ಲ. ಭಾರತದ ಗೆಲುವು ಆಕಸ್ಮಿಕ ಎಂಬುದೇ ಅವರ ವಾದವಾಗಿತ್ತು. ಇದನ್ನು ಸಾಧಿಸುವ ಛಲ ಮನೆಮಾಡಿತ್ತು. ಅದೇ ವರ್ಷ ಭಾರತಕ್ಕೆ ಪ್ರವಾಸ ಕೈಗೊಂಡ ವೆಸ್ಟ್ ಇಂಡೀಸ್ 5 ಪಂದ್ಯಗಳ ಸರಣಿಯನ್ನು ಕ್ಲೀನ್‌ಸಿÌàಪ್ ಆಗಿ ವಶಪಡಿಸಿಕೊಂಡು ಅಷ್ಟರ ಮಟ್ಟಿಗೆ ಸಮಾಧಾನಪಟ್ಟಿತು!
20 ಸಾವಿರ ಪೌಂಡ್ ಬಹುಮಾನ
ವಿಶ್ವವಿಜೇತ ಭಾರತ
ತಂಡಕ್ಕೆ ಅಂದು ಐಸಿಸಿಯಿಂದ ಲಭಿಸಿದ ಬಹುಮಾನ 20 ಸಾವಿರ ಪೌಂಡ್. ಜತೆಗೊಂದು ಬೆಳ್ಳಿ ಸ್ಮರಣಿಕೆ.
ಭಾರತ ತಂಡ
ಕಪಿಲ್‌ದೇವ್ (ನಾಯಕ), ಸುನೀಲ್ ಗಾವಸ್ಕರ್, ಕೆ. ಶ್ರೀಕಾಂತ್, ಮೊಹಿಂದರ್ ಅಮರನಾಥ್, ದಿಲೀಪ್ ವೆಂಗ್‌ಸರ್ಕಾರ್, ಸಂದೀಪ್ ಪಾಟೀಲ್, ಯಶ್ಪಾಲ್ ಶರ್ಮ, ಕೀರ್ತಿ ಆಜಾದ್, ರೋಜರ್ ಬಿನ್ನಿ, ಸಯ್ಯದ್ ಕಿರ್ಮಾನಿ, ಮದನ್‌ಲಾಲ್, ರವಿಶಾಸ್ತ್ರಿ, ಬಲ್ವಿಂದರ್ ಸಂಧು, ಸುನೀಲ್ ವಾಲ್ಸನ್.
ಗ್ರೂಪ್ “ಎ’ ಇಂಗ್ಲೆಂಡ್, ಪಾಕಿಸ್ಥಾನ, ನ್ಯೂಜಿಲ್ಯಾಂಡ್, ಶ್ರೀಲಂಕಾ.
ಗ್ರೂಪ್ “ಬಿ’ ವೆಸ್ಟ್ ಇಂಡೀಸ್, ಭಾರತ, ಆಸ್ಟ್ರೇಲಿಯ, ಜಿಂಬಾಬ್ವೆ.
ಸೆಮಿಫೈನಲ್-1: ಇಂಗ್ಲೆಂಡ್-ಭಾರತ
ಸೆಮಿಫೈನಲ್-2: ಪಾಕಿಸ್ಥಾನ-ವೆಸ್ಟ್ ಇಂಡೀಸ್
ಭಾರತ-ವೆಸ್ಟ್ ಇಂಡೀಸ್
ಜೂನ್ 25, ಲಾರ್ಡ್ಸ್, ಲಂಡನ್
1983 ವಿಶ್ವಕಪ್ ಫೈನಲ್
ಭಾರತ
ಸುನೀಲ್ ಗಾವಸ್ಕರ್ ಸು ಡೂಜಾನ್ ಬಿ ರಾಬರ್ಟ್ಸ್ 2
ಕೆ. ಶ್ರೀಕಾಂತ್ ಎಲ್‌ಬಿಡಬ್ಲ್ಯು ಮಾರ್ಷಲ್ 38
ಮೊಹಿಂದರ್ ಅಮರನಾಥ್ ಬಿ ಹೋಲ್ಡಿಂಗ್ 26
ಯಶ್‌ಪಾಲ್ ಶರ್ಮ ಸಿ ಲೋಗಿ ಬಿ ಗೋಮ್ಸ್ 11
ಸಂದೀಪ್ ಪಾಟೀಲ್ ಸಿ ಗೋಮ್ಸ್ ಬಿ ಗಾರ್ನರ್ 27
ಕಪಿಲ್‌ದೇವ್ ಸಿ ಹೋಲ್ಡಿಂಗ್ ಬಿ ಗೋಮ್ಸ್ 15
ಕೀರ್ತಿ ಆಜಾದ್ ಸಿ ಗಾರ್ನರ್ ಬಿ ರಾಬರ್ಟ್ಸ್ 0
ರೋಜರ್ ಬಿನ್ನಿ ಸಿ ಗಾರ್ನರ್ ಬಿ ರಾಬರ್ಟ್ಸ್ 2
ಮದನ್‌ಲಾಲ್ ಬಿ ಮಾರ್ಷಲ್ 17
ಸಯ್ಯದ್ ಕಿರ್ಮಾನಿ ಬಿ ಹೋಲ್ಡಿಂಗ್ 14
ಬಲ್ವಿಂದರ್ ಸಂಧು ಔಟಾಗದೆ 11
ಇತರ 20
ಒಟ್ಟು (54.4 ಓವರ್‌ಗಳಲ್ಲಿ ಆಲೌಟ್) 183
ವಿಕೆಟ್ ಪತನ: 1-2, 2-59, 3-90, 4-92, 5-110, 6-111, 7-130, 8-153, 9-161.
ಬೌಲಿಂಗ್:
ಆ್ಯಂಡಿ ರಾಬರ್ಟ್ಸ್ 10-3-32-3
ಜೋಯೆಲ್ ಗಾರ್ನರ್ 12-4-24-1
ಮಾಲ್ಕಂ ಮಾರ್ಷಲ್ 11-1-24-2
ಮೈಕಲ್ ಹೋಲ್ಡಿಂಗ್ 9.4-2-26-2
ಲಾರಿ ಗೋಮ್ಸ್ 11-1-49-2
ವಿವಿಯನ್ ರಿಚರ್ಡ್ಸ್ 1-0-8-0
ವೆಸ್ಟ್ ಇಂಡೀಸ್
ಗಾರ್ಡನ್ ಗ್ರೀನಿಜ್ ಬಿ ಸಂಧು 1
ಡೆಸ್ಮಂಡ್ ಹೇನ್ಸ್ ಸಿ ಬಿನ್ನಿ ಬಿ ಮದನ್‌ಲಾಲ್ 13
ವಿವಿಯನ್ ರಿಚರ್ಡ್ಸ್ ಸಿ ಕಪಿಲ್ ಬಿ ಮದನ್‌ಲಾಲ್ 33
ಕ್ಲೈವ್ ಲಾಯ್ಡ ಸಿ ಕಪಿಲ್ ಬಿ ಬಿನ್ನಿ 8
ಲಾರಿ ಗೋಮ್ಸ್ ಸಿ ಗಾವಸ್ಕರ್ ಬಿ ಮದನ್‌ಲಾಲ್ 5
ಫೌದ್ ಬ್ಯಾಕಸ್ ಸಿ ಕಿರ್ಮಾನಿ ಬಿ ಸಂಧು 8
ಜೆಫ್ ಡೂಜಾನ್ ಬಿ ಮೊಹಿಂದರ್ 25
ಮಾಲ್ಕಂ ಮಾರ್ಷಲ್ ಸಿ ಗಾವಸ್ಕರ್ ಬಿ ಮೊಹಿಂದರ್ 18
ಆ್ಯಂಡಿ ರಾಬರ್ಟ್ಸ್ ಎಲ್‌ಬಿಡಬ್ಲ್ಯು ಕಪಿಲ್ 4
ಜೋಯೆಲ್ ಗಾರ್ನರ್ ಔಟಾಗದೆ 5
ಮೈಕಲ್ ಹೋಲ್ಡಿಂಗ್ ಎಲ್‌ಬಿಡಬ್ಲ್ಯು ಮೊಹಿಂದರ್ 6
ಇತರ 14
ಒಟ್ಟು (52 ಓವರ್‌ಗಳಲ್ಲಿ ಆಲೌಟ್) 140
ವಿಕೆಟ್ ಪತನ: 1-5, 2-50, 3-57, 4-66, 5-66, 6-76, 7-119, 8-124, 9-126.
ಬೌಲಿಂಗ್: ಕಪಿಲ್‌ದೇವ್ 11-4-21-1
ಬಲ್ವಿಂದರ್ ಸಂಧು 9-1-32-2
ಮದನ್‌ಲಾಲ್ 12-2-31-3
ರೋಜರ್ ಬಿನ್ನಿ 10-1-23-1
ಮೊಹಿಂದರ್ ಅಮರನಾಥ್ 7-0-12-3
ಕೀರ್ತಿ ಆಜಾದ್ 3-0-7-0
ಪಂದ್ಯಶ್ರೇಷ್ಠ: ಮೊಹಿಂದರ್ ಅಮರನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.