ಧೋನಿ ಔಟಾದಾಗ ಫೋಟೋಗ್ರಾಪರ್ ಅತ್ತಿದ್ದು ನಿಜವೇ ?
Team Udayavani, Jul 14, 2019, 12:27 PM IST
ಹೊಸದೆಹಲಿ: ಇತ್ತೀಚೆಗಷ್ಟೇ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಕಿವೀಸ್ ವಿರುದ್ದ ಟೀಂ ಇಂಡಿಯಾ ಸೋಲನುಭವಿಸಿದ ಬಳಿಕ ಒಂದು ಫೋಟೋ ಭಾರಿ ಜನಪ್ರಿಯವಾಗಿತ್ತು. ಧೋನಿ ಔಟ್ ಆಗುವ ಸಂದರ್ಭದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಆ ವೈರಲ್ ಫೋಟೋದ ಅಸಲೀಯತ್ತು ಈಗ ಬಯಲಾಗಿದೆ.
ಯಾವ ಫೋಟೋ, ಯಾವ ಘಟನೆ ?
ಸೆಮಿ ಫೈನಲ್ ಪಂದ್ಯಾಟದಲ್ಲಿ ಭಾರತ ಇನ್ನೇನು ಸೋತೇ ಬಿಡ್ತು ಎನ್ನುವಾಗ ಧೋನಿ ಮತ್ತು ಜಡೇಜಾ ಸೇರಿ ಭಾರತ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು. ಆಟದ ಕೊನೆಯಲ್ಲಿ ಧೋನಿ ಬೀಸಿ ಹೊಡೆಯಬೇಕು ಎನ್ನುವಾಗ ರನ್ ಔಟ್ ಆಗಿ ಪೆವಿಲಿಯನ್ ಸೇರಿದ್ರು. ಆ ಮೂಲಕ ಕೋಟ್ಯಾಂತರ ಭಾರತೀಯರ ವಿಶ್ವಕಪ್ ಆಸೆ ನುಚ್ಚುನೂರಾಗಿತ್ತು.
ಪಂದ್ಯ ಮುಗಿದ ನಂತರ ಆ ಒಂದು ಫೋಟೋ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಧೋನಿ ರನ್ ಔಟ್ ಆದಾಗ ಫೋಟೋಗ್ರಾಫರ್ ಒಬ್ಬ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯವದು. ಭಾರತ ತಂಡವನ್ನು ಜಯದ ಹಾದಿಗೆ ತಲುಪಿಸುತ್ತಾರೆ ಎಂದು ಧೋನಿ ಮೇಲೆ ಇಟ್ಟಿದ್ದ ಭರವಸೆ ಸುಳ್ಳಾದಾಗ ಫೋಟೋಗ್ರಾಫರ್ ಈ ರೀತಿ ಅತ್ತಿದ್ದಾನೆ ಎಂದು ವಿಶ್ಲೇಷಣೆಗಳು ನಡೆದಿತ್ತು.
Picture speaks louder than words! ?#ThankYouMSD #Dhoni pic.twitter.com/6pRPAFpmB5
— Prabhat Sharma ?? (@Prabhat28432285) July 11, 2019
ಅಸಲೀಯತ್ತೇನು?
ಆದರೆ ಈ ವೈರಲ್ ಫೋಟೋದ ಫಾಕ್ಟ್ ಚೆಕ್ ಮಾಡಿದಾಗ ಗೊತ್ತಾದ ಅಸಲೀಯತ್ತೇನು ಗೊತ್ತಾ? ಆ ಫೋಟೋಗ್ರಾಫರ್ ಭಾರತೀಯನೇ ಅಲ್ಲ. ಅದರಲ್ಲೂ ಅದು ಕ್ರಿಕೆಟ್ ಆಟದ ವೇಳೆ ತೆಗೆದ ಚಿತ್ರವೇ ಅಲ್ಲ. ಮತ್ತೇನು ? ಮುಂದೆ ಓದಿ.
ಆ ಛಾಯಾಗ್ರಾಹಕನ ಹೆಸರು ಮೊಹಮ್ಮದ್ ಅಲ್ ಅಜಾ಼ವಿ. ಆತ ಇರಾಕ್ ದೇಶದ ಪ್ರಜೆ. 2019ರ ಜನವರಿಯಲ್ಲಿ ನಡೆದ ಏಶ್ಯಾನ್ ಕಪ್ ಫುಟ್ ಬಾಲ್ ಕೂಟದ ವೇಳೆ ಸೆರೆಹಿಡಿಯಲಾದ ಚಿತ್ರವಿದು.
ಯುಏಇಯಲ್ಲಿ ನಡೆದಿದ್ದ ಕಾಲ್ಚೆಂಡು ಆಟದ ಕೂಟದಲ್ಲಿ ತವರು ದೇಶ ಸೋತಾಗ ಅಜಾ಼ವಿ ದುಖಿತನಾಗಿದ್ದ. ಈ ಚಿತ್ರವನ್ನು ಏಶ್ಯಾನ್ ಕಪ್ 2023 ಎಂಬ ಟ್ವೀಟರ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿತ್ತು ಕೂಡಾ. ಆದರೆ ಯಾರೋ ಈ ಚಿತ್ರವನ್ನು ಧೋನಿ ರನ್ ಔಟ್ ದೃಶ್ಯದ ಜೊತೆ ಸೇರಿಸಿ ವೈರಲ್ ಮಾಡಿದ್ದರು.
Passionate. Emotional moment for an Iraqi photographer during the Round of 16 clash against ?? ! #AsianCup2019 pic.twitter.com/KZoXsp1N4U
— #AsianCup2023 (@afcasiancup) January 24, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.