ಬಿಗ್‌ ಸೆಮಿಫೈನಲ್‌ಗ‌ೂ ಮುನ್ನ ಭಾರತಕ್ಕೆ ಮಿಡ್ಲ್ ಆರ್ಡರ್‌ ಪರೀಕ್ಷೆ

ಇಂದು ಶ್ರೀಲಂಕಾ ವಿರುದ್ಧ ಭಾರತಕ್ಕೆ ಅಂತಿಮ ಲೀಗ್‌ ಪಂದ್ಯ

Team Udayavani, Jul 6, 2019, 5:21 AM IST

AP7_5_2019_000249B

ಲೀಡ್ಸ್‌: ಭಾರತದ ಸೆಮಿಫೈನಲ್‌ ಸ್ಥಾನ ಪಕ್ಕಾ ಆಗಿದೆ. ಈ ಖುಷಿಯಲ್ಲಿ ಶ್ರೀಲಂಕಾ ವಿರುದ್ಧ ಶನಿವಾರ ತನ್ನ ಅಂತಿಮ ಲೀಗ್‌ ಪಂದ್ಯವನ್ನು ಆಡಲಿದೆ. ದಿನದ ಇನ್ನೊಂದು ಪಂದ್ಯ ಆಸೀಸ್‌-ದ.ಆಫ್ರಿಕಾ ನಡುವೆ ನಡೆಯಲಿದೆ.


ಮೊದಲೆರಡು ಸ್ಥಾನಗಳಲ್ಲಿ ಪಲ್ಲಟವೇನಾದರೂ ಸಂಭವಿಸೀತೇ ಎಂಬ ಕಾರಣಕ್ಕಾಗಿ ಈ ಪಂದ್ಯಗಳು ಕುತೂಹಲ ಕೆರಳಿಸಿವೆ.

ಲಂಕೆಯನ್ನು ಮಣಿಸಿದರೆ ಭಾರತ ಕೆಲವು ಗಂಟೆಗಳ ಮಟ್ಟಿಗಾದರೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಲಿದೆ. ಅಕಸ್ಮಾತ್‌ ದಕ್ಷಿಣ ಆಫ್ರಿಕಾ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯವನ್ನು ಕೆಡವಿದರೆ ಟೀಮ್‌ ಇಂಡಿಯಾ ಮೊದಲ ಸ್ಥಾನವನ್ನೇ ಕಾಯ್ದುಕೊಳ್ಳಲಿದೆ. ಆಗ ಸೆಮಿಫೈನಲ್‌ನಲ್ಲಿ ಅಷ್ಟೇನೂ ಬಲಿಷ್ಠವಲ್ಲದ ನ್ಯೂಜಿಲ್ಯಾಂಡ್‌ ತಂಡ ಭಾರತಕ್ಕೆ ಎದುರಾಗಲಿದೆ. ಆತಿಥೇಯ ಹಾಗೂ ಬಲಿಷ್ಠ ಇಂಗ್ಲೆಂಡನ್ನು ಮಣಿಸುವುದಕ್ಕಿಂತ ಕಿವೀಸ್‌ ತಂಡವನ್ನು ಉರುಳಿಸುವುದು ಸುಲಭ ಎಂಬುದೊಂದು ಲೆಕ್ಕಾಚಾರ!

ಮಧ್ಯಮ ಕ್ರಮಾಂಕದ ಸಮಸ್ಯೆ
ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದರೂ ಕೊಹ್ಲಿ ಪಡೆ ಒತ್ತಡ ಮುಕ್ತವೇನಲ್ಲ. ಬಿಗ್‌ ಸೆಮಿಫೈನಲ್‌ಗ‌ೂ ಮುನ್ನ ತನ್ನ ಮಧ್ಯಮ ಕ್ರಮಾಂಕದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಜರೂರತು ತಂಡದ ಮೇಲಿದೆ. ಇದಕ್ಕೆ ಲಂಕಾ ಪಂದ್ಯ ವೇದಿಕೆ ಒದಗಿಸಲಿದೆ.

ಭಾರತದ ಆರಂಭ, ಅಗ್ರ ಕ್ರಮಾಂಕ, ವೇಗದ ಬೌಲಿಂಗ್‌ ವಿಭಾಗ ಎಲ್ಲವೂ ಈವರೆಗೆ ಕ್ಲಿಕ್‌ ಆಗುತ್ತಲೇ ಬಂದಿದೆ. ಆದರೆ ಮಿಡ್ಲ್ ಆರ್ಡರ್‌ ಸಮಸ್ಯೆ ಮಾತ್ರ ಉಳಿದುಕೊಂಡಿದೆ. ಸೆಮಿಫೈನಲ್‌ ಪಂದ್ಯ ಹೆಚ್ಚು ಕಠಿನ ಹಾಗೂ ತೀವ್ರ ಪೈಪೋಟಿಯಿಂದ ಕೂಡಿರುವುದರಿಂದ ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯ.

ಧೋನಿ ವರ್ಸಸ್‌ ಧನಂಜಯ
ರಿಷಭ್‌ ಪಂತ್‌ ಸೇರ್ಪಡೆಯಿಂದ ಮಧ್ಯಮ ಕ್ರಮಾಂಕಕ್ಕೆ ತುಸು ಬಲ ಬಂದಿದೆಯಾದರೂ ಅನುಭವಿ ಧೋನಿ ಫಾರ್ಮ್, ಅವರ ನಿಧಾನ ಗತಿಯ ಆಟ ಚಿಂತೆಯನ್ನು ತಂದೊಡ್ಡಿದೆ. ಅಂತಿಮ 10 ಓವರ್‌ಗಳಲ್ಲಿ ಭಾರತ ತೀವ್ರ ರನ್‌ ಬರಗಾಲ ಅನುಭವಿಸುತ್ತಿದೆ. ನಾಕೌಟ್‌ ಹಂತದಲ್ಲಿ ಇದು ಬಹಳ ದುಬಾರಿಯಾಗಿ ಕಾಡುವ ಅಪಾಯವಿದೆ.

ಶ್ರೀಲಂಕಾದ ಆಫ್ ಸ್ಪಿನ್ನರ್‌ ಧನಂಜಯ ಡಿ ಸಿಲ್ವ ಅತ್ಯಂತ ಪರಿಣಾಮಕಾರಿ ಬೌಲಿಂಗ್‌ ಸಂಘಟಿಸುತ್ತಿದ್ದು, ಇವರು “ಮಿಡ್ಲ್ ಓವರ್’ನಲ್ಲಿ ದಾಳಿಗಿಳಿಯುವ ಸಾಧ್ಯತೆ ಹೆಚ್ಚು. ಆಗ ಧೋನಿ ಚಡಪಡಿಸುವ ಸಾಧ್ಯತೆ ಇದೆ. ಈ ಕೂಟದಲ್ಲಿ ಸ್ಪಿನ್ನರ್‌ಗಳಿಂದ 81 ಎಸೆತ ಎದುರಿಸಿರುವ ಧೋನಿ, ಕೇವಲ 47 ರನ್‌ ಗಳಿಸಿದ್ದಾರೆ. ಧೋನಿಯ ಈ ಸಮಸ್ಯೆಯನ್ನು ಮನಗಂಡು ಎಡಗೈ ಸ್ಪಿನ್ನರ್‌ ಮಿಲಿಂದ ಸಿರಿವರ್ಧನ ಅವರನ್ನು ಲಂಕಾ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.

ಲಸಿತ ಮಾಲಿಂಗ ಅವರ ಯಾರ್ಕರ್‌ಗಳೂ ಡೆತ್‌ ಓವರ್‌ಗಳಲ್ಲಿ ಭಾರತಕ್ಕೆ ಸಮಸ್ಯೆಯಾಗಿ ಕಾಡಲೂಬಹುದು. ತಮ್ಮ ಕೊನೆಯ ವಿಶ್ವಕಪ್‌ ಪಂದ್ಯವನ್ನು ಮಾಲಿಂಗ ಸ್ಮರಣೀಯಗೊಳಿಸಲು ಪ್ರಯತ್ನಿಸುವುದು ಖಂಡಿತ.

ಜಡೇಜಾಗೆ ಸಿಕ್ಕೀತೇ ಅವಕಾಶ?
ಮಧ್ಯಮ ಕ್ರಮಾಂಕದಲ್ಲಿ ದಿನೇಶ್‌ ಕಾರ್ತಿಕ್‌ ಅವರನ್ನು ಆಡಿಸಿ ನೋಡಿದರೂ ಪ್ರಯೋಜನವಾಗಲಿಲ್ಲ. “ಲಾಸ್ಟ್‌ ಚಾನ್ಸ್‌’ ಎಂಬಂತೆ ಆಲ್‌ರೌಂಡರ್‌ ರವೀಂದ್ರ ಜಡೇಜ ಅವರನ್ನು ಆಡಿಸುವುದು ದಿಟ್ಟ ಹೆಜ್ಜೆಯಾದೀತು. ಲಂಕಾ ಸರದಿಯಲ್ಲಿ ಸಾಕಷ್ಟು ಮಂದಿ ಎಡಗೈ ಆಟಗಾರರಿರುವುದೂ ಇದಕ್ಕೆ ಕಾರಣ.
ಬದಲಿ ಆಟಗಾರ ಮಾಯಾಂಕ್‌ ಅಗರ್ವಾಲ್‌ ಈಗಾಗಲೇ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ ಆಡುವ ಬಳಗ ಪ್ರವೇಶಿಸುವುದು ಅಸಂಭವ.

ಸಂಭಾವ್ಯ ತಂಡಗಳು
ಭಾರತ: ರೋಹಿತ್‌ ಶರ್ಮ, ಕೆ.ಎಲ್‌. ರಾಹುಲ್‌, ವಿರಾಟ್‌ ಕೊಹ್ಲಿ (ನಾಯಕ), ರಿಷಭ್‌ ಪಂತ್‌, ಎಂ. ಎಸ್‌. ಧೋನಿ, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ, ಚಹಲ್‌, ಜಸ್‌ಪ್ರೀತ್‌ ಬುಮ್ರಾ.

ಶ್ರೀಲಂಕಾ: ದಿಮುತ್‌ ಕರುಣರತ್ನೆ (ನಾಯಕ), ಕುಸಲ್‌ ಪೆರೆರ, ಆವಿಷ್ಕ ಫೆರ್ನಾಂಡೊ, ಕುಸಲ್‌ ಮೆಂಡಿಸ್‌, ಏಂಜೆಲೊ ಮ್ಯಾಥ್ಯೂಸ್‌, ಧನಂಜಯ ಡಿ ಸಿಲ್ವ, ಜೀವನ್‌ ಮೆಂಡಿಸ್‌, ತಿಸರ ಪೆರೆರ, ಇಸುರು ಉದಾನ, ಸುರಂಗ ಲಕ್ಮಲ್‌, ಲಸಿತ ಮಾಲಿಂಗ.

ರೋಹಿತ್‌ ಮುಂದೆ ಇನಷ್ಟು ದಾಖಲೆಗಳು
ಪ್ರಸಕ್ತ ವಿಶ್ವಕಪ್‌ನಲ್ಲಿ ಪ್ರಚಂಡ ಫಾರ್ಮ್ನಲ್ಲಿರುವ ರೋಹಿತ್‌ ಶರ್ಮ ಈಗಾಗಲೇ 4 ಶತಕ ಬಾರಿಸಿ ಎದುರಾಳಿಗಳಿಗೆ ಸಿಂಹಸ್ವಪ್ನರಾಗಿದ್ದಾರೆ. 96.96ರ ಸರಾಸರಿಯಲ್ಲಿ 544 ರನ್‌ ಪೇರಿಸಿದ್ದು ಇವರ ಸಾಧನೆ. ಈ ಕೂಟದಲ್ಲಿ ಗರಿಷ್ಠ 3 ಪಂದ್ಯಗಳನ್ನು ಆಡುವ ಅವಕಾಶ ಹೊಂದಿರುವ ಅವರ ಮುಂದೆ ಇನ್ನಷ್ಟು ದಾಖಲೆಗಳು ಕಾದು ಕುಳಿತಿವೆ.

ಅತ್ಯಧಿಕ 5 ಶತಕ
ಇನ್ನೊಮ್ಮೆ ಮೂರಂಕೆಯ ಗಡಿ ದಾಟಿದರೆ ವಿಶ್ವಕಪ್‌ ಕೂಟವೊಂದರಲ್ಲಿ ಅತೀ ಹೆಚ್ಚು 5 ಶತಕ ಬಾರಿಸಿದ ದಾಖಲೆ ರೋಹಿತ್‌ ಶರ್ಮ ಅವರದಾಗುತ್ತದೆ. ಕುಮಾರ ಸಂಗಕ್ಕರ ಕೂಡ 4 ಶತಕ ಬಾರಿಸಿದ್ದಾರೆ (2015). ತಮ್ಮ 3 ದ್ವಿಶತಕಗಳಲ್ಲಿ ಎರಡನ್ನು ಶ್ರೀಲಂಕಾ ವಿರುದ್ಧವೇ ಸಿಡಿಸಿರುವ ರೋಹಿತ್‌, ಶನಿವಾರ ಇಂಥದೇ ಕಮಾಲ್‌ ಮಾಡಿಯಾರೇ ಎಂಬ ಕುತೂಹಲವೂ ಇದೆ.

ಕೂಟದಲ್ಲಿ ಗರಿಷ್ಠ ರನ್‌
ವಿಶ್ವಕಪ್‌ ಕೂಟವೊಂದರಲ್ಲಿ ಅತ್ಯಧಿಕ 673 ರನ್‌ ಬಾರಿಸಿದ ತೆಂಡುಲ್ಕರ್‌ ದಾಖಲೆಯನ್ನು ಮುರಿಯುವ ಅವಕಾಶವೂ ರೋಹಿತ್‌ ಮುಂದಿದೆ. ಇದಕ್ಕಾಗಿ ಅವರು 130 ರನ್‌ ಗಳಿಸಿದರೆ ಸಾಕು. ಸದ್ಯ ಈ ಯಾದಿಯಲ್ಲಿ ರೋಹಿತ್‌ 5ನೇ ಸ್ಥಾನದಲ್ಲಿ ದ್ದಾರೆ. ಇವರಿಗಿಂತ ಮುಂದಿರುವ ಉಳಿದ ಮೂವರೆಂದರೆ ಹೇಡನ್‌ (659), ಜಯವರ್ಧನೆ (548), ಗಪ್ಟಿಲ್‌ (547).

ವರ್ಲ್ಡ್ಕಪ್‌ ಗ್ರೂಪ್‌/ಲೀಗ್‌ ಹಂತದಲ್ಲಿ ಅತೀ ಹೆಚ್ಚು ರನ್‌ ಬಾರಿಸಿದ ದಾಖಲೆಯೂ ರೋಹಿತ್‌ಗೆ ಒಲಿಯಬಹುದು. ಸದ್ಯ ಇದು ತೆಂಡುಲ್ಕರ್‌ ಹೆಸರಲ್ಲಿದೆ (586). ಲಂಕಾ ಎದುರು 43 ರನ್‌ ಮಾಡಿದರೆ ರೋಹಿತ್‌ ಈ ದಾಖಲೆಯ ಒಡೆಯನಾಗುತ್ತಾರೆ.

ಟಾಪ್ ನ್ಯೂಸ್

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

16

Pro Kabaddi: ಗುಜರಾತ್‌ಗೆ ರೋಚಕ ಜಯ

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.