ವಾನ್ ರಚಿಸಿದ ಸಾರ್ವಕಾಲಿಕ ಭಾರತ-ಪಾಕ್ ತಂಡ
Team Udayavani, Jun 16, 2019, 6:42 AM IST
ಲಂಡನ್: ಐಸಿಸಿ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ಥಾನ ನಡುವಣ ಸಮರಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಈ ವೇಳೆ ಇಂಗ್ಲೆಂಡಿನ ಮಾಜಿ ನಾಯಕ ಮೈಕಲ್ ವಾನ್ ಸಾರ್ವಕಾಲಿಕ ಭಾರತ-ಪಾಕಿಸ್ಥಾನ ಏಕದಿನ ತಂಡವೊಂದನ್ನು ಆಯ್ಕೆ ಮಾಡಿದ್ದಾರೆ.
ಭಾರತೀಯ ವಿಶ್ವಕಪ್ ತಂಡದ ಮೂವರು (ಕೊಹ್ಲಿ, ಧೋನಿ, ಬುಮ್ರಾ) ಸದಸ್ಯರು ವಾನ್ ಆಯ್ಕೆಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಹಾಲಿ ಪಾಕಿಸ್ಥಾನ ತಂಡದ ಯಾವುದೇ ಆಟಗಾರ ಈ ತಂಡದಲ್ಲಿಲ್ಲ. ಹಾಗೆಯೇ ಭಾರತಕ್ಕೆ ಮೊದಲ ವಿಶ್ವಕಪ್ ತಂದಿತ್ತ ನಾಯಕ ಕಪಿಲ್‌ದೇವ್ ಅವರಿಗೂ ಜಾಗವಿಲ್ಲ.
ಆರಂಭಿಕರಾಗಿ ತೆಂಡುಲ್ಕರ್ ಮತ್ತು ಸೆಹವಾಗ್ ಅವರನ್ನು ವಾನ್ ಆಯ್ಕೆ ಮಾಡಿದ್ದಾರೆ. 3 ಮತ್ತು 4ನೇ ಕ್ರಮಾಂಕದಲ್ಲಿ ಕೊಹ್ಲಿ ಮತ್ತು ಪಾಕಿಸ್ಥಾನದ ಮಾಜಿ ನಾಯಕ ಇಂಝಮಾಮ್ ಉಲ್ ಹಕ್ ಅವರನ್ನು ಆರಿಸಿದ್ದಾರೆ.ವಿಕೆಟ್ ಕೀಪರ್ ಮತ್ತು ನಾಯಕರಾಗಿ ಧೋನಿ ಅವರನ್ನು ಆಯ್ಕೆ ಮಾಡಲಾಗಿದೆ. ಅನಿಲ್ ಕುಂಬ್ಳೆ ತಂಡದಲ್ಲಿರುವ ಏಕೈಕ ಸ್ಪಿನ್ನರ್.
ಭಾರತ-ಪಾಕ್ ತಂಡ: ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹವಾಗ್, ವಿರಾಟ್ ಕೊಹ್ಲಿ, ಇಂಝಮಾಮ್ ಉಲ್ ಹಕ್, ಜಾವೇದ್ ಮಿಯಾಂದಾದ್, ಎಂ.ಎಸ್. ಧೋನಿ (ನಾಯಕ), ಇಮ್ರಾನ್ ಖಾನ್, ವಾಸಿಮ್ ಅಕ್ರಮ್, ಅನಿಲ್ ಕುಂಬ್ಳೆ, ಜಸ್‌ಪ್ರೀತ್ ಬುಮ್ರಾ ಮತ್ತು ವಕಾರ್ ಯೂನಿಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.