ಈಡನ್‌ಗೆ ಬೆಂಕಿ, ಕಣ್ಣೀರು ಸುರಿಸಿದ ಕಾಂಬ್ಳಿ!


Team Udayavani, May 22, 2019, 9:35 AM IST

EDEN-GARDEN

ಕೋಲ್ಕತಾದ “ಈಡನ್‌ ಗಾರ್ಡನ್ಸ್‌’ನಲ್ಲಿ ನಡೆದ ಭಾರತ-ಶ್ರೀಲಂಕಾ ನಡುವಿನ ಸೆಮಿಫೈನಲ್‌ ಪಂದ್ಯ ಕೂಟದ ಕಪ್ಪುಚುಕ್ಕಿಯಾಗಿ ದಾಖಲಾಯಿತು. ಭಾರತ ಸೋಲು ಖಾತ್ರಿಯಾಗುತ್ತಲೇ ರೊಚ್ಚಿಗೆದ್ದ ವೀಕ್ಷಕರು ದುಂಡಾವರ್ತಿ ನಡೆಸಿ ಈಡನ್‌ ಸ್ಟಾಂಡ್‌ ಒಂದಕ್ಕೆ ಬೆಂಕಿ ಹಚ್ಚಿದರು. ಜಾಗತಿಕ ಕ್ರಿಕೆಟ್‌ನಲ್ಲಿ ಭಾರತದ ಪ್ರತಿಷ್ಠೆಗೆ ಮಸಿ ಬಳಿದರು.

ಆಗ ಶ್ರೀಲಂಕಾ ಪ್ರಚಂಡ ಫಾರ್ಮ್ನಲ್ಲಿತ್ತು. ಮೊದಲು ಬ್ಯಾಟಿಂಗ್‌ ನಡೆಸಿ 8ಕ್ಕೆ 251 ರನ್‌ ಪೇರಿಸಿತ್ತು. ಭಾರತ ಕೂಡ ದಿಟ್ಟ ಜವಾಬು ನೀಡಿತು. 98ಕ್ಕೆ ಒಂದೇ ವಿಕೆಟ್‌ ಕಳೆದುಕೊಂಡು ಮುನ್ನುಗ್ಗುತ್ತಿತ್ತು. ಆಗ 65 ರನ್‌ ಮಾಡಿದ ತೆಂಡುಲ್ಕರ್‌ ಔಟಾದರು. ಪಂದ್ಯದ ಚಿತ್ರಣವೇ ಬದಲಾಯಿತು. ಸ್ಕೋರ್‌ 120ಕ್ಕೆ ಏರುವಷ್ಟರಲ್ಲಿ ಭಾರತದ 8 ವಿಕೆಟ್‌ ಉರುಳಿ ಹೋಗಿತ್ತು.

ಇನ್ನು ಸೋಲು ಖಚಿತ ಎಂದು ತೀರ್ಮಾನಿಸಿ ರೊಚ್ಚಿಗೆದ್ದ ವೀಕ್ಷಕರು ಸ್ಟಾಂಡ್‌ ಒಂದಕ್ಕೆ ಅಗ್ನಿಸ್ಪರ್ಶ ಮಾಡಿದರು. ಪರಿಸ್ಥಿತಿ ಹದಗೆಡುತ್ತಿರುವುದನ್ನು ಗಮನಿ ಸಿದ ರೆಫ್ರಿ ಕ್ಲೈವ್‌ ಲಾಯ್ಡ ಪಂದ್ಯವನ್ನೇ ರದ್ದುಗೊಳಿಸಿ ಶ್ರೀಲಂಕಾದ ಗೆಲುವನ್ನು ಸಾರಿದರು. 1983ರ ಫೈನಲ್‌ನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಲಾಯ್ಡಗೆ ಈ ರೀತಿಯಾಗಿ ದಕ್ಕಿತ್ತು! ಆಗ 10 ರನ್‌ ಮಾಡಿ ಆಡುತ್ತಿದ್ದ ವಿನೋದ್‌ ಕಾಂಬ್ಳಿ ಈ ವಿದ್ಯಮಾನದಿಂದ ನೊಂದು ಕ್ರೀಸಿನಲ್ಲೇ ಕಣ್ಣೀರು ಸುರಿಸುತ್ತ ನಿಂತ ದೃಶ್ಯ ಭಾರತದ ಕ್ರಿಕೆಟ್‌ ಅಭಿಮಾನಿಗಳ ಸಂಕಟಕ್ಕೆ ಸಾಕ್ಷಿಯಾಗಿತ್ತು.

ಫೀಲ್ಡಿಂಗ್‌ ನಿರ್ಬಂಧದ ಲಾಭ; ಜಯಸೂರ್ಯ ಸ್ಫೋಟ
ಈವರೆಗಿನ ವಿಶ್ವಕಪ್‌ ಪಂದ್ಯಾವಳಿಗಳಿಗೆ ಹೋಲಿಸಿದರೆ ಇದು ಸ್ಫೋಟಕ ಬ್ಯಾಟಿಂಗಿನ ವಿಶ್ವರೂಪವಾಗಿತ್ತು. ಮೊದಲ 15 ಓವರ್‌ಗಳ ತನಕ ವಿಧಿಸಲಾದ ಫೀಲ್ಡಿಂಗ್‌ ನಿರ್ಬಂಧದ ಲಾಭವನ್ನು ಹೇಗೆ ಎತ್ತಬಹುದು ಎಂಬುದನ್ನು ಇಲ್ಲಿ ಲಂಕೆಯ ಆರಂಭಕಾರ ಸನತ್‌ ಜಯಸೂರ್ಯ ತೋರಿಸಿಕೊಟ್ಟರು. ಸ್ಟ್ರೈಕ್‌ ಬೌಲರ್‌ಗಳೆಲ್ಲ ಸಖತ್ತಾಗಿ ಹೊಡೆಸಿಕೊಂಡರು. ಮನೋಜ್‌ ಪ್ರಭಾಕರ್‌ ಅವರಂಥವರಿಗೆ ತಂಡದ ಬಾಗಿಲು ಶಾಶ್ವತವಾಗಿ ಮುಚ್ಚಿತು!

15 ಓವರ್‌ಗಳಲ್ಲೇ 100ರನ್‌!
ಸರ್ಕಲ್‌ನ ಹೊರಗೆ ಕೇವಲ ಇಬ್ಬರೇ ಫೀಲ್ಡರ್ ನಿಲ್ಲುವುದರಿಂದ ಚೆಂಡನ್ನು ಉಳಿದ ಕ್ಷೇತ್ರರಕ್ಷಕರ ತಲೆಯ ಮೇಲಿಂದ ಬಾರಿಸಲು ಜಯಸೂರ್ಯ ಮತ್ತು ಅವರ ಜತೆಗಾರ ರೊಮೇಶ್‌ ಕಲುವಿತರಣ ಮುಂದಾದರು. ಆಗ ಬೌಂಡರಿ, ಸಿಕ್ಸರ್‌ಗಳ ಪ್ರವಾ ಹವೇ ಹರಿದು ಬಂತು. ಮೊದಲ 15 ಓವರ್‌ಗಳಲ್ಲೇ ತಂಡದ ಮೊತ್ತ ನೂರರ ಗಡಿ ದಾಟತೊಡಗಿತು. ಲಂಕೆಯ ವಿಶ್ವ ವಿಕ್ರಮದಲ್ಲಿ ಈ ಬ್ಯಾಟಿಂಗ್‌ ತಂತ್ರಗಾರಿಕೆಯದೇ ಸಿಂಹಪಾಲಾಗಿತ್ತು! ಹಿಂದಿನ ವಿಶ್ವಕಪ್‌ನಲ್ಲಿ ನ್ಯೂಜಿಲ್ಯಾಂಡಿನ ಮಾರ್ಕ್‌ ಗ್ರೇಟ್‌ಬ್ಯಾಚ್‌ ಮತ್ತು ಭಾರತದ ಕೆ. ಶ್ರೀಕಾಂತ್‌ ಇದೇ ಬ್ಯಾಟಿಂಗ್‌ ಟೆಕ್ನಿಕ್‌ ಪ್ರದರ್ಶಿಸಿದರೂ ಇದು ಇಷ್ಟು ಯಶಸ್ಸು ಕಂಡಿರಲಿಲ್ಲ.

ಭಾರತ ತಂಡ
ಮೊಹಮ್ಮದ್‌ ಅಜರುದ್ದೀನ್‌ (ನಾಯಕ), ಸಚಿನ್‌ ತೆಂಡುಲ್ಕರ್‌ (ಉಪನಾಯಕ), ನವಜೋತ್‌ ಸಿಂಗ್‌ ಸಿದ್ದು, ಸಂಜಯ್‌ ಮಾಂಜ್ರೆಕರ್‌, ವಿನೋದ್‌ ಕಾಂಬ್ಳಿ, ಅಜಯ್‌ ಜಡೇಜ, ನಯನ್‌ ಮೊಂಗಿಯ, ಅನಿಲ್‌ ಕುಂಬ್ಳೆ, ಜಾವಗಲ್‌ ಶ್ರೀನಾಥ್‌, ವೆಂಕಟೇಶ ಪ್ರಸಾದ್‌, ಮನೋಜ್‌ ಪ್ರಭಾಕರ್‌, ಸಲಿಲ್‌ ಅಂಕೋಲಾ, ಆಶಿಷ್‌ ಕಪೂರ್‌, ವೆಂಕಟಪತಿ ರಾಜು.

ಟಾಪ್ ನ್ಯೂಸ್

8-bntwl

Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

Laxmi-Minister

ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು

SriLanka ನೌಕಾಪಡೆಯಿಂದ 17 ತಮಿಳುನಾಡಿನ ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

12-google-search

Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?

Jaipur: 13 ಮಂದಿಯನ್ನು ಬಲಿ ಪಡೆದ ದುರಂತದಲ್ಲಿ LPG ಟ್ಯಾಂಕರ್ ಚಾಲಕ ಬದುಕುಳಿದಿದ್ದೇ ರೋಚಕ

ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8-bntwl

Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

Laxmi-Minister

ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.