ವಿಂಡೀಸ್-ಅಫ್ಘಾನ್ ಔಪಚಾರಿಕ ಪಂದ್ಯ
Team Udayavani, Jul 4, 2019, 5:00 AM IST
ಲೀಡ್ಸ್: ಈವರೆಗೆ ಯಾವುದೇ ಮ್ಯಾಜಿಕ್ ಮಾಡದೆ ಎಂಟೂ ಪಂದ್ಯಗಳಲ್ಲಿ ಸೋತಿರುವ ಅಫ್ಘಾನಿಸ್ಥಾನ ಮತ್ತು ಕಳಪೆ ಪ್ರದರ್ಶನದಿಂದಲೇ ಸುದ್ದಿಯಾದ ವೆಸ್ಟ್ ಇಂಡೀಸ್ ಗುರುವಾರ “ಲೆಕ್ಕದ ಭರ್ತಿ’ಯ ಪಂದ್ಯವನ್ನು ಆಡಲಿವೆ.
ಹೀಗಾಗಿ ಈ ಪಂದ್ಯದಲ್ಲಿ ಯಾವುದೇ ಕುತೂಹಲ ಉಳಿದಿಲ್ಲ. ಬಲಿಷ್ಠ ತಂಡವೆಂದೇ ಗುರುತಿ ಸಲ್ಪಟ್ಟಿದ್ದ ವೆಸ್ಟ್ ಇಂಡೀಸ್ ತೀರಾ ಕಳಪೆ ಪ್ರದರ್ಶನ ನೀಡಿ ಹೊರಬಿದ್ದಿದೆ. ಅಫ್ಘಾನ್‌ಗಿಂತ ಒಂದು ಮೆಟ್ಟಿಲಷ್ಟೇ ಮೇಲಿದೆ. ಗೆದ್ದರೆ ಒಂದು ಮೆಟ್ಟಿಲು ಮೇಲೇರಬಹುದು, ಅಷ್ಟೇ.
ತಂಡವಾಗಿ ಆಡಬೇಕಿದೆ
ಮೊದಲ ಸಲ ಅರ್ಹತಾ ಪಂದ್ಯಾ ವಳಿಯನ್ನಾಡಿ ವಿಶ್ವಕಪ್ ಮುಖ್ಯ ಸುತ್ತಿಗೆ ಬಂದಿದ್ದ ವಿಂಡೀಸ್, ಬಲಿಷ್ಠ ಆಟಗಾರರನ್ನೂ ಹೊಂದಿಯೂ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲ ವಾಗಿದೆ. ಆಗಾಗ ಯಾರಾದರೊಬ್ಬರು ಸಿಡಿಯುತ್ತಾರೆಯೇ ಹೊರತು ಸಾಂ ಕ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಪ್ರಯತ್ನಿಸುತ್ತಿಲ್ಲ. ಒಂದು ಹಂತದ ವರೆಗೆ ಉತ್ತಮ ಪ್ರದರ್ಶನ ತೋರಿ ಹಠಾತ್ ಕುಸಿತ ಕಂಡು ಪಂದ್ಯವನ್ನು ಕೈಚೆಲ್ಲುವುದು ಹವ್ಯಾಸವಾಗಿದೆ.ಅಫ್ಘಾನಿಸ್ಥಾನ ಗೆಲ್ಲದೇ ಹೋದರೂ ಭಾರತ ಮತ್ತು ಪಾಕಿಸ್ಥಾನಕ್ಕೆ ಬೆವರಿ ಳಿಸಿದ್ದನ್ನು ಮರೆಯುವಂತಿಲ್ಲ. ತಂಡದ ಬ್ಯಾಟಿಂಗ್ ತೀರಾ ಕೆಳ ಮಟ್ಟದಲ್ಲಿದೆ. ಸ್ಪಿನ್ನರ್ ರಶೀದ್ ಖಾನ್ ವೈಫಲ್ಯ ತಂಡದ ಈ ಸ್ಥಿತಿಗೆ ಪ್ರಮುಖ ಕಾರಣವಾಗಿದೆ.
ಸಂಭಾವ್ಯ ತಂಡಗಳು
ಅಫ್ಘಾನಿಸ್ಥಾನ
ಗುಲ್ಬದಿನ್ ನೈಬ್ (ನಾಯಕ), ರಹಮತ್ ಶಾ, ಹಶ್ಮತುಲ್ಲ ಶಾಹಿದಿ, ಅಸYರ್ ಅಫ್ಘಾನ್, ಮೊಹಮ್ಮದ್ ನಬಿ, ಸಮಿಯುಲ್ಲ ಶಿನ್ವರಿ, ಇಕ್ರಮ್ ಅಲಿ ಖೀಲ್, ನಜೀಬುಲ್ಲ ಜದ್ರಾನ್, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ಶಿರ್ಜಾದ್.
ವೆಸ್ಟ್ ಇಂಡೀಸ್
ಕ್ರಿಸ್ ಗೇಲ್, ಸುನೀಲ್ ಆ್ಯಂಬ್ರಿಸ್, ಶೈ ಹೋಪ್, ನಿಕೋಲಸ್ ಪೂರನ್, ಶಿಮ್ರನ್ ಹೆಟ್‌ಮೈರ್, ಜಾಸನ್ ಹೋಲ್ಡರ್ (ನಾಯಕ), ಕಾರ್ಲೋಸ್ ಬ್ರಾತ್‌ವೇಟ್, ಫ್ಯಾಬಿಯನ್ ಅಲೆನ್, ಆ್ಯಶೆÉ ನರ್ಸ್/ಕೆಮರ್ ರೋಚ್, ಒಶೇನ್ ಥಾಮಸ್, ಶೆಲ್ಡನ್ ಕಾಟ್ರೆಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.