World Cup; ಬಾಂಗ್ಲಾ ಟೈಗರ್… ಎಚ್ಚರ ಟೀಮ್ ಇಂಡಿಯಾ!
ಸತತ 4ನೇ ಗೆಲುವಿನ ನಿರೀಕ್ಷೆಯಲ್ಲಿ ರೋಹಿತ್ ಪಡೆ, ಶಕಿಬ್ ಬಳಗಕ್ಕೆ ಏರುಪೇರಿನ ತವಕ
Team Udayavani, Oct 19, 2023, 6:00 AM IST
ಪುಣೆ: ವಿಶ್ವಕಪ್ ಪಂದ್ಯಾವಳಿಯಲ್ಲಿ ಏರುಪೇರು ಫಲಿತಾಂಶಗಳ ಆಟ ಮೊದಲ್ಗೊಂಡಿದೆ. ಮೂರೇ ದಿನದ ಅಂತರದಲ್ಲಿ ಎರಡು “ಬಿಗ್ ಅಪ್‌ಸೆಟ್’ ಕಂಡುಬಂದಿದೆ. ಅಫ್ಘಾನಿ ಸ್ಥಾನ ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಸೋಲಿನೇಟು ನೀಡಿದ ಬಳಿಕ ಮಂಗಳವಾರ ವಷ್ಟೇ ನೆದರ್ಲೆಂಡ್ಸ್ ತಂಡದ ವೀರಾವೇಶಕ್ಕೆ ದಕ್ಷಿಣ ಆಫ್ರಿಕಾ ನೆಲಕಚ್ಚಿದೆ. ಗುರುವಾರ ಪುಣೆಯಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿರುವ ಭಾರತಕ್ಕೆ ಸಹಜವಾಗಿಯೇ ಇದೊಂದು ಎಚ್ಚರಿಕೆಯ ಗಂಟೆ.
ಆಸ್ಟ್ರೇಲಿಯ, ಅಫ್ಘಾನಿಸ್ಥಾನ ಮತ್ತು ಪಾಕಿ ಸ್ಥಾನವನ್ನು ಮಣಿಸಿದ ರೋಹಿತ್ ಪಡೆಗೆ ಇದು 4ನೇ ಮುಖಾಮುಖೀ. ತಂಡದ ಫಾರ್ಮ್ ಮತ್ತು ಮೊದಲ ಮೂರು ಪಂದ್ಯಗಳಲ್ಲಿ ನೀಡಿದ ಹೋರಾಟವನ್ನು ಗಮನಿಸಿದರೆ ಬಾಂಗ್ಲಾದೇಶದ ವಿರುದ್ಧ ಭಾರತವೇ ನೆಚ್ಚಿನ ತಂಡ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಕಳೆದ 4 ದಿನಗಳಿಂದ ವಿಶ್ವಕಪ್ ಪಂದ್ಯಾ ವಳಿಯ ಚಿತ್ರಣವನ್ನು ಗಮನಿಸುವಾಗ ಇಲ್ಲಿ ಏನೂ ಸಂಭವಿಸಬಹುದು ಎಂಬುದು ಸ್ಪಷ್ಟ ವಾಗ ತೊಡಗಿದೆ. ಟೀಮ್ ಇಂಡಿಯಾ ಈ ಎಚ್ಚರಿಕೆಯಲ್ಲೇ ಬಾಂಗ್ಲಾದೇಶವನ್ನು ಎದುರಿಸ ಬೇಕಾದುದು ಅತ್ಯಗತ್ಯ.
ಬಾಂಗ್ಲಾದೇಶ ಕೂಡ ಅಪಾಯಕಾರಿ ತಂಡಗಳಲ್ಲೊಂದು. ವಿಶ್ವಕಪ್‌ನಲ್ಲೇ ಭಾರತಕ್ಕೆ ಇದರ ಅನುಭವವಾಗಿದೆ. ವೆಸ್ಟ್ ಇಂಡೀಸ್‌ನಲ್ಲಿ ನಡೆದ 2007ರ ವರ್ಲ್ಡ್ಕಪ್‌ನ ಪೋರ್ಟ್ ಆಫ್ ಸ್ಪೇನ್ ಮುಖಾಮುಖೀಯಲ್ಲಿ ಬಾಂಗ್ಲಾದೇಶ 5 ವಿಕೆಟ್‌ಗಳಿಂದ ಭಾರತವನ್ನು ಮಗುಚಿತ್ತು. ಇದರಿಂದ ಭಾರತ ಲೀಗ್ ಹಂತ ದಲ್ಲೇ ಹೊರಬೀಳುವ ದುರಂತಕ್ಕೆ ಸಿಲುಕಿ ದ್ದನ್ನು ಮರೆಯುವಂತಿಲ್ಲ. ಅಂದಹಾಗೆ ಇದು ವಿಶ್ವಕಪ್‌ನಲ್ಲಿ ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಸ್ಪರ್ಧೆ ಕೂಡ ಆಗಿತ್ತು.
ಅನಂತರದ 3 ವಿಶ್ವಕಪ್ ಪಂದ್ಯಗಳಲ್ಲಿ ಬಾಂಗ್ಲಾವನ್ನು ಮಣಿಸುವ ಮೂಲಕ ಭಾರತ ಬಡ್ಡಿ ಸಮೇತ ಸೇಡು ತೀರಿಸಿಕೊಂಡಿತು ಎಂಬುದು ಬೇರೆ ಮಾತು. 2011ರಲ್ಲಿ 87 ರನ್ ಗೆಲುವು, 2015ರಲ್ಲಿ 109 ರನ್ ಜಯ, 2019ರಲ್ಲಿ 28 ರನ್ ಜಯ ಸಾಧಿಸಿತ್ತು. ಕಳೆದ ವಿಶ್ವಕಪ್‌ನ ಬರ್ಮಿಂಗ್‌ಹ್ಯಾಮ್ ಪಂದ್ಯದಲ್ಲಿ ಭಾರತ 9ಕ್ಕೆ 314 ರನ್ ಪೇರಿಸಿಯೂ ಗೆಲ್ಲಲು ಹರಸಾಹಸಪಟ್ಟಿತ್ತು. ಬಾಂಗ್ಲಾ 286ರ ತನಕ ಬೆನ್ನಟ್ಟಿಕೊಂಡು ಬಂದಿತ್ತು. ಇನ್ನೂ 2 ಓವರ್‌ಗಳ ಆಟ ಬಾಕಿ ಇತ್ತು. ಈ ಪಂದ್ಯ ಕೂಡ ಭಾರತಕ್ಕೆ ಪಾಠ ಆಗಬೇಕಿದೆ.
ಇಲ್ಲಿ ಇನ್ನೂ ಒಂದು ಪ್ರಮುಖ ಅಂಶವಿದೆ. ಭಾರತದ ವಿರುದ್ಧ ಆಡಿದ ಕಳೆದ 4 ಏಕದಿನ ಪಂದ್ಯಗಳಲ್ಲಿ ಬಾಂಗ್ಲಾದೇಶ ಮೂರರಲ್ಲಿ ಜಯ ಸಾಧಿಸಿದೆ! ಇದರಲ್ಲಿ 2 ಗೆಲುವು 2022ರ ದ್ವಿಪಕ್ಷೀಯ ಸರಣಿಯಲ್ಲಿ ಒಲಿದಿತ್ತು. ಬಾಂಗ್ಲಾದ ಇನ್ನೊಂದು ಜಯ ಮೊನ್ನೆಯ ಏಷ್ಯಾ ಕಪ್ ಸೂಪರ್ ಫೋರ್ ಹಂತದಲ್ಲಿ ದಾಖಲಾಗಿತ್ತು. ಆದರೆ ಇದರಿಂದ ಭಾರತದ ಏಷ್ಯಾ ಕಪ್ ಜಯಕ್ಕೇನೂ ಅಡ್ಡಿ ಆಗಿರಲಿಲ್ಲ.
ಇನ್ನು ಈ ಸಲದ ವಿಶ್ವಕಪ್ ಸಂಗತಿ. ಭಾರತ ಈಗಾಗಲೇ ಗೆಲುವಿನ ಹ್ಯಾಟ್ರಿಕ್ ಸಾಧಿಸಿ ಅಭಿಯಾನ ಜಾರಿಯಲ್ಲಿರಿಸಿದೆ. ಮೊದಲು ಆಸ್ಟ್ರೇಲಿಯವನ್ನು, ಬಳಿಕ ಅಫ್ಘಾನಿಸ್ಥಾನವನ್ನು, ಕೊನೆಯ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ಥಾನವನ್ನು ಹೊಡೆದುರುಳಿಸಿದೆ. ಇನ್ನೊಂದೆಡೆ ಬಾಂಗ್ಲಾದೇಶ ಕೂಡ 3 ಪಂದ್ಯ ಗಳನ್ನಾಡಿದೆ. ಮೊದಲ ಪಂದ್ಯದಲ್ಲಿ ಅಫ್ಘಾನಿಸ್ಥಾನವನ್ನು ಸೋಲಿಸಿದ ಬಳಿಕ ತಾನೇ ಸೋಲಿನ ಹಾದಿ ಹಿಡಿದಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಹೋರಾಟ ನೀಡದೆ ಸೋತಿದೆ.
ಭಾರತದ ವಿರುದ್ಧ ಏನು ಸಾಧಿಸೀತು ಎಂಬ ಕುತೂಹಲ ಸಹಜ.ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಫಾರ್ಮ್ ಬಗ್ಗೆ ಯಾವ ಚಿಂತೆಯೂ ಇಲ್ಲ. ರೋಹಿತ್ ಶರ್ಮ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ ಅವರನ್ನೊಳಗೊಂಡ ಬ್ಯಾಟಿಂಗ್ ಲೈನ್‌ಅಪ್ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುತ್ತ ಬಂದಿದೆ. ಆಸ್ಟ್ರೇಲಿಯ ವಿರುದ್ದದ ಮೊದಲ ಪಂದ್ಯ ದಲ್ಲಿ 2 ರನ್ನಿಗೆ 3 ವಿಕೆಟ್ ಉರುಳಿದ್ದು ಟೀಮ್ ಇಂಡಿಯಾ ಪಾಲಿಗೊಂದು “ಅಲಾರ್ಮ್’ ಆಗಿತ್ತು. ಇದರಿಂದ ಇಡೀ ತಂಡವೇ ಎಚ್ಚೆತ್ತುಕೊಂಡಿದೆ.
ಹಾಗೆಯೇ ಆಲ್‌ರೌಂಡ್ ವಿಭಾಗ. ಇಲ್ಲಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ ನಿರ್ಣಾ ಯಕವಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ಭಾರೀ ಜೋಶ್‌ನಲ್ಲಿದ್ದಾರೆ. ಪಾಕಿ ಸ್ಥಾನ ವನ್ನು 191ಕ್ಕೆ ಹಿಡಿದು ನಿಲ್ಲಿಸಿದ ಆ ಉತ್ಸಾಹ ಕೆಲವು ಪಂದ್ಯ ಗಳಿಗಾಗುವಷ್ಟು ಸಾಕು. ಈ ಪಂದ್ಯದಲ್ಲಿ ಸಮ ಪಾಲು-ಸಮ ಬಾಳು ಎಂಬಂತೆ 5 ಮಂದಿ ಬೌಲರ್ ತಲಾ 2 ವಿಕೆಟ್ ಉರುಳಿಸಿದ್ದರು. ಆದರೆ ಶಾರ್ದೂಲ್ ಠಾಕೂರ್ ಔಚಿತ್ಯ ಇನ್ನೂ ಅರಿವಾಗುತ್ತಿಲ್ಲ. ಇದರಿಂದ ಮೊಹಮ್ಮದ್ ಶಮಿ ಮತ್ತು ಆರ್. ಅಶ್ವಿನ್‌ಗೆ ಅನ್ಯಾಯವಾಗುತ್ತಿರುವುದು ಸ್ಪಷ್ಟ.
ಬ್ಯಾಟಿಂಗ್ ಟ್ರ್ಯಾಕ್
ಪುಣೆಯ “ಎಂಸಿಎ ಸ್ಟೇಡಿಯಂ’ ಬ್ಯಾಟಿಂಗ್‌ಗೆ ಧಾರಾಳ ನೆರವು ನೀಡಿದ ದಾಖಲೆ ಹೊಂದಿದೆ. ಇಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡದ ಸರಾಸರಿ ಸ್ಕೋರ್ 307 ರನ್. ಇಲ್ಲಿ ದಾಖಲಾದ ಸರ್ವಾಧಿಕ ಮೊತ್ತ 356 ರನ್.
ಬಾಂಗ್ಲಾ ಹಾದಿ ಸುಗಮವಲ್ಲ
ಬಾಂಗ್ಲಾದೇಶ ಹ್ಯಾಟ್ರಿಕ್ ಸೋಲಿನ ಹಾದಿಯಲ್ಲಿದೆ. ಭಾರತ ವಿರುದ್ಧ ಎಡವಿದರೆ ಮುಂದಿನ ಹಾದಿ ಸುಗಮವಲ್ಲ ಎಂಬ ಅರಿವು ಶಕಿಬ್ ಪಡೆಗೆ ಇದೆ. ಆದರೆ ತಂಡದ ಈಗಿನ ಸ್ಥಿತಿ ಅಷ್ಟೇನೂ ಆಶಾದಾಯಕವಾಗಿಲ್ಲ. ಲಿಟನ್ ದಾಸ್ ಮತ್ತು ಮೆಹಿದಿ ಹಸನ್ ಮಿರಾಜ್ ಒಂದೊಂದು ಫಿಫ್ಟಿ ಹೊಡೆದಿದ್ದಾರೆ. ಆದರೂ ಅಗ್ರ ಕ್ರಮಾಂಕ ಅದುರುತ್ತಿದೆ. ಮಧ್ಯಮ ಸರದಿಯಲ್ಲಿ ನಜ್ಮುಲ್ ಹುಸೇನ್, ತೌಹಿದ್ ಹೃದಯ್ ಪ್ರಯತ್ನ ಸಾಲದು. ಹೀಗಾಗಿ ರಹೀಂ ಮೇಲೆ ಒತ್ತಡ ಹೆಚ್ಚುತ್ತಿದೆ. ನಾಯಕ ಶಕಿಬ್ ಕೂಡ ಶಕ್ತಿ ತುಂಬುತ್ತಿಲ್ಲ. ಬೌಲಿಂಗ್‌ನಲ್ಲಿ ಟಸ್ಕಿನ್ ಅಹ್ಮದ್ ಅವರ ಫಾರ್ಮ್ ಕೈಕೊಟ್ಟದ್ದು ಬೌಲಿಂಗ್ ವಿಭಾಗಕ್ಕೆ ಎದುರಾಗಿರುವ ದೊಡ್ಡ ಹಿನ್ನಡೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.