World Cup; ಮ್ಯಾಕ್ಸ್ ವೆಲ್ ಅತೀ ವೇಗದ ಶತಕದ ದಾಖಲೆ: ನೆದರ್ಲ್ಯಾಂಡ್ಸ್ ಗೆ 400 ಗುರಿ!
ವಾರ್ನರ್ ಶತಕದ ಬೆನ್ನಲ್ಲೇ ಅಬ್ಬರಿಸಿದ ಮ್ಯಾಕ್ಸ್ ವೆಲ್
Team Udayavani, Oct 25, 2023, 6:16 PM IST
ಹೊಸದಿಲ್ಲಿ: ಇಲ್ಲಿ ಬುಧವಾರ ನೆದರ್ಲ್ಯಾಂಡ್ಸ್ ವಿರುದ್ಧ ನಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯ ಅಬ್ಬರಿಸಿದ್ದು, ಮ್ಯಾಕ್ಸ್ ವೆಲ್ ಸ್ಪೋಟಕ ದಾಖಲೆಯ ಶತಕ, ವಾರ್ನರ್ ಅವರ ಅಮೋಘ ಶತಕದ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 399 ರನ್ ಗಳನ್ನು ಕಲೆ ಹಾಕಿದೆ.
ಆಸ್ಟ್ರೇಲಿಯ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ತಂಡ 28 ರನ್ ಗಳಿಸಿದ್ದ ವೇಳೆ 9 ರನ್ ಗಳಿಸಿದ್ದ ಮಿಚೆಲ್ ಮಾರ್ಷ್ ಔಟಾದರು. ಆ ಬಳಿಕ ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ ಅಮೋಘ ಜತೆಯಾಟವಾಡಿದರು. ವಾರ್ನರ್ 93 ಎಸೆತಗಳಲ್ಲಿ 104 ರನ್ ಗಳಿಸಿ ಔಟಾದರು. ಸ್ಮಿತ್ 71 ರನ್ ಗಳಿಸಿ ಔಟಾದರು. ಆ ಬಳಿಕ ಗ್ಲೆನ್ ಮ್ಯಾಕ್ಸ್ ವೆಲ್ ಅಬ್ಬರಿಸಿದರು. 40 ಎಸೆತಗಳಲ್ಲಿ 102 ರನ್ ಗಳಿಸಿ ವಿಶ್ವ ಕಪ್ ನ ಅತೀ ವೇಗದ ಶತಕದ ದಾಖಲೆ ತನ್ನ ಹೆಸರಿಗೆ ಬರೆದುಕೊಂಡರು. 44 ಎಸೆತಗಳಲ್ಲಿ 106 ರನ್ ಗಳಿಸಿ ಔಟಾದರು. ಅವರು 9 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್ ಸಿಡಿಸಿದ್ದರು. ಜೋಶ್ ಇಂಗ್ಲಿಸ್ 14, ಪ್ಯಾಟ್ ಕಮ್ಮಿನ್ಸ್ ಔಟಾಗದೆ 12 ರನ್ ಗಳಿಸಿದರು.
ಈ ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಾಮ್ ಬರೆದ ದಾಖಲೆಯನ್ನು ಮ್ಯಾಕ್ಸ್ ವೆಲ್ ಮುರಿದರು.ಲೋಗನ್ ವ್ಯಾನ್ ಬೀಕ್ 4 ವಿಕೆಟ್ ಪಡೆದರು.
ವಿಶ್ವಕಪ್‌ಗಳಲ್ಲಿ ಅತಿ ವೇಗದ ಶತಕಗಳು
ಗ್ಲೆನ್ ಮ್ಯಾಕ್ಸ್‌ವೆಲ್ – (40 ಎಸೆತ) ನೆದರ್ಲ್ಯಾಂಡ್ಸ್ ವಿರುದ್ಧ (ದೆಹಲಿ)
ಈ ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಾಮ್ (49 ಎಸೆತ) ಶ್ರೀಲಂಕಾ ವಿರುದ್ಧ ( ದೆಹಲಿ)
ಐರ್ಲ್ಯಾಂಡ್ ನ ಕೆವಿನ್ ಒ’ಬ್ರೇನ್ (50 ಎಸೆತ) ಇಂಗ್ಲೆಂಡ್ ವಿರುದ್ಧ , ಬೆಂಗಳೂರು 2011
ಗ್ಲೆನ್ ಮ್ಯಾಕ್ಸ್‌ವೆಲ್ (51 ಎಸೆತ) ಶ್ರೀಲಂಕಾ ವಿರುದ್ಧ ಸಿಡ್ನಿ 2015
ಎಬಿ ಡಿವಿಲಿಯರ್ಸ್ (52 ಎಸೆತ) ವೆಸ್ಟ್ ಇಂಡೀಸ್ ವಿರುದ್ಧ ಸಿಡ್ನಿ 2015
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
World Cup 2023; ಫೈನಲ್ ನಲ್ಲಿ ನಾವು ರಕ್ಷಣಾತ್ಮಕವಾಗಿ ಆಡಿದ್ದಲ್ಲ,ಆದರೆ….: ಕೋಚ್ ದ್ರಾವಿಡ್
World Cup 2023 ; ಭಾರತವನ್ನು ರೂಪಿಸಿದ ತ್ರಿಮೂರ್ತಿಗಳು
ICC ವಿಶ್ವಕಪ್ ಸಾಧಕರ ತಂಡಕ್ಕೆ ರೋಹಿತ್ ನಾಯಕ; ತಂಡ ಹೀಗಿದೆ
World Cup Final; ವೀಕ್ಷಕರು ಮೌನಕ್ಕೆ ಶರಣು:ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಫುಲ್ ಖುಷ್
Head line ನಲ್ಲಿ ಮಿಂಚಿದ ಟ್ರ್ಯಾವಿಸ್ ಹೆಡ್
MUST WATCH
ಹೊಸ ಸೇರ್ಪಡೆ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.