Rakshit Shetty Padre; ಸಾರ್ಥಕತೆ ಕಂಡ ಯಕ್ಷ ಸಿದ್ಧಿ ದಶಮಾನೋತ್ಸವ ಸಂಭ್ರಮ


Team Udayavani, Aug 31, 2024, 11:34 PM IST

1-yyyy

ವೃತ್ತಿಪರ ಮೇಳದಿಂದ ನಿವೃತ್ತರಾದ ಮೇಲೆ ಆಸಕ್ತರಿಗೆ ಯಕ್ಷ ಶಿಕ್ಷಣ ನೀಡಿದ ಕಲಾವಿದರು ನಮ್ಮಲ್ಲಿ ಬಹಳಷ್ಟು ಮಂದಿ ಇದ್ದಾರೆ. ಆದರೆ ವೃತ್ತಿಪರ ಮೇಳದ ಬಹುಬೇಡಿಕೆಯ ಕಲಾವಿದನಾಗಿರುವಾಗಲೇ ಹಗಲಿನಲ್ಲಿ ಯಕ್ಷಗಾನ ತರಬೇತಿ ನೀಡಿ ಯಕ್ಷಗುರು ಎನಿಸಿಕೊಂಡವರು ನಮ್ಮಲ್ಲಿ ಬೆರಳೆಣಿಕೆ ಯಷ್ಟು ಮಂದಿ ಮಾತ್ರ. ಇವರಲ್ಲಿ ಹನು ಮಗಿರಿ ಮೇಳದಲ್ಲಿ ಕಲಾವಿದರಾಗಿ ರುವ “ನಾಟ್ಯ ಮಯೂರಿ’ ಖ್ಯಾತಿಯ 33ರ ಹರೆಯದ ರಕ್ಷಿತ್‌ ಶೆಟ್ಟಿ ಪಡ್ರೆ ಪ್ರಮುಖರು. ಕಳೆದ ಹತ್ತು ವರ್ಷಗಳಿಂದ ಅವಿಭಜಿತ ದ.ಕ. ಜಿಲ್ಲೆಯ ಅನೇಕ ಕಡೆ ಯಕ್ಷ ಶಿಕ್ಷಣವನ್ನು ನೀಡುತ್ತಿರುವ ಇವರು ಕಿರಿಯ ಪ್ರಾಯದಲ್ಲೇ ಯಕ್ಷಗುರುವಾಗಿ ಹೆಸರನ್ನು ಪಡೆದಿದ್ದಾರೆ. ಇವರ ಯಕ್ಷ ವಿದ್ಯಾರ್ಥಿಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮಾತ್ರ.

ವಲ್ಲ, ಪುರುಷ ಹಾಗೂ ಮಹಿಳಾ ಉದ್ಯೋಗಿಗಳೂ, ಗೃಹಿಣಿಯರೂ ಇದ್ದಾರೆ. ನಿಟ್ಟೆ, ಎಸ್‌.ಡಿ.ಎಂ. ವಿದ್ಯಾ ಸಂಸ್ಥೆಗಳಲ್ಲೂ ಯಕ್ಷ ತರಬೇತಿ ನೀಡಿ ಪ್ರಬುದ್ಧ ಹವ್ಯಾಸಿ ಕಲಾವಿದರನ್ನು ರೂಪಿಸಿದ ಹೆಗ್ಗಳಿಕೆ ಇವರದಾಗಿದೆ. ಪ್ರತೀ ವರುಷ ತನ್ನ ಶಿಷ್ಯಂದಿರನ್ನು ಒಟ್ಟುಗೂಡಿಸಿ “ಯಕ್ಷ ಸಿದ್ಧಿ ಸಂಭ್ರಮ’ ಎಂಬ ಹೆಸರಿನಲ್ಲಿ ಯಕ್ಷಗಾನ ಪ್ರದರ್ಶನವನ್ನೂ ಆಯೋಜಿಸುತ್ತಾ ಬಂದಿದ್ದಾರೆ. ತಾನು ಕಲಿಸಿದ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಯನ್ನು ಪ್ರದರ್ಶಿಸಲು ಅವಕಾಶ ಅಥವಾ ವೇದಿಕೆಯನ್ನು ಒದಗಿಸುವುದೇ ಈ “ಸಿದ್ಧಿ ಸಂಭ್ರಮ’ ದ ಮುಖ್ಯ ಉದ್ದೇಶ.

ಈ ಬಾರಿ ಇವರ ಯಕ್ಷ ಶಿಕ್ಷಣ ಕಾರ್ಯಕ್ಕೆ ಹತ್ತು ವರ್ಷಗಳಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಂಗಳೂರಿನ ಜಿಲ್ಲಾ ಅಂಬೇಡ್ಕರ್‌ ಭವನದಲ್ಲಿ “ಯಕ್ಷ ಸಿದ್ಧಿ ಸಂಭ್ರಮ – ಸಿದ್ಧಿ ದಶಯಾನ’ ಕಾರ್ಯಕ್ರಮವನ್ನು ವಿನೂತನವಾಗಿ, ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಗಣ್ಯರ ಸಮ್ಮುಖದಲ್ಲಿ ಯಕ್ಷ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ, ಯಕ್ಷ ಸಿದ್ಧಿ ಪ್ರಶಸ್ತಿ, ಸಾಧಕರಿಗೆ ಸಮ್ಮಾನ ಕಾರ್ಯ ಕ್ರಮಗಳೂ ನಡೆದವು. ಎರಡೂ ದಿನ ರಕ್ಷಿತ್‌ ಪಡ್ರೆಯವರ ಮುನ್ನೂರಕ್ಕೂ ಮಿಕ್ಕಿದ ಯಕ್ಷ ವಿದ್ಯಾರ್ಥಿಗಳು ಒಟ್ಟು ಸೇರಿ ವೈವಿಧ್ಯತೆಯಿಂದ ಕೂಡಿದ ಯಕ್ಷಕಲಾ ವೈಭವವನ್ನು ಪ್ರದರ್ಶಿಸಿದರು. ಪರಂಪರೆಯ ಪೂರ್ವ ರಂಗ, ದೇವ ಸೇನಾನಿ, ಲೀಲಾಮಾನುಷ ವಿಗ್ರಹ, ದಶಾವತಾರ, ಪಾದ ಪ್ರತೀಕ್ಷಾ, ಧರ್ಮ ದಂಡನೆ ಮುಂತಾದ ಪ್ರಸಂಗಗಳ ಯಕ್ಷಗಾನ ಪ್ರದರ್ಶನ, ಮಹಿಳಾ ಯಕ್ಷಗಾನ ಪಾವನ ಪಕ್ಷಿ, ತೆಂಕು-ಬಡಗು ಯಕ್ಷಗಾನ ನಾಗ ಶ್ರೀ, ಯಕ್ಷಗಾನ ರೂಪಕ ದಾಶರಥಿ ದರ್ಶನ, ಯಕ್ಷ ನವರಸ ವೈಭವ, ವಿಶಿಷ್ಟ ಪರಿಕಲ್ಪನೆಯ “ನೃತ್ಯ ವಾಚನ -ಚಿತ್ರ ಕಥನ’, ವಿನೂತನ ಪ್ರಯೋಗವಾದ ಹಿಮ್ಮಿಂಚು ಯಕ್ಷಗಾನ, “ನೀನೋ ನಾನೋ’ ಯಕ್ಷಗಾನ ವೈವಿಧ್ಯ ಇವೆಲ್ಲವೂ ಯಕ್ಷ ಪ್ರೇಮಿಗಳಿಗೆ ಯಕ್ಷಗಾನದ ರಸದೌತಣ ಉಣಬಡಿಸುವಲ್ಲಿ ಯಶಸ್ವಿಯಾದವು. ಪುಟಾಣಿ ಹಾಗೂ ಯುವ ಕಲಾವಿದರ ಪೈಪೋಟಿಯ ಕುಣಿತ, ಮಾತು ಪ್ರೇಕ್ಷಕರಿಗೆ ಮುದ ನೀಡಿತು. ಮಕ್ಕಳಿಂದ ತೊಡಗಿ ವಯಸ್ಕರ ವರೆಗೆ ಮಹಿಳೆಯರೂ ಸೇರಿದಂತೆ ಅವರವರ ಆಯ-ಕಾಯಕ್ಕೆ ಒಗ್ಗುವ ಆಕರ್ಷಕ ವೇಷಭೂಷಣಗಳೂ ಕಾರ್ಯ ಕ್ರಮದ ಒಟ್ಟಂದವನ್ನು ಹೆಚ್ಚಿಸಿತು.

ಎಲ್ಲರಿಗೂ ಅವಕಾಶ ಕೊಡುವ ಅನಿವಾರ್ಯತೆಯಿಂದಾಗಿ ಹೆಚ್ಚಿನ ಪಾತ್ರಗಳನ್ನು ಎರಡು ಅಥವಾ ಮೂರು ಮಂದಿಗೆ ಹಂಚಿ ಕೊಟ್ಟದ್ದರಿಂದ ಕಲಾ ರಸಿಕರಿಗೂ ವೀಕ್ಷಣೆಯಲ್ಲಿ ವೈವಿಧ್ಯತೆ ದೊರಕಿತು. ಒಟ್ಟಿನಲ್ಲಿ ಎರಡು ದಿನ ನಡೆದ ಸಿದ್ಧಿ ದಶಮಾನೋತ್ಸವ ಸಂಭ್ರಮದಲ್ಲಿ ಅನುಭವಿ ಹಿಮ್ಮೇಳ ಕಲಾವಿದರ ಸಹಕಾರದೊಂದಿಗೆ ಯಕ್ಷ ವಿದ್ಯಾರ್ಥಿಗಳು ನೀಡಿದ ಅತ್ಯುತ್ತಮ ನಿರ್ವಹಣೆಯ ಹಿಂದೆ ಗುರು ರಕ್ಷಿತ್‌ ಶೆಟ್ಟಿ ಪಡ್ರೆಯವರ ಬೆಲೆ ಕಟ್ಟಲಾಗದ ಶ್ರಮ ಎದ್ದು ಕಾಣುತ್ತಿತ್ತು. ಸಣ್ಣ ವಯಸ್ಸಿನಲ್ಲೇ ಇಷ್ಟೊಂದು ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣ ನೀಡುವುದರ ಮೂಲಕ ಯಕ್ಷಗಾನ ಕಲೆಯನ್ನು ಯುವ ಜನಾಂಗಕ್ಕೆ ಪಸರಿಸಿ, ಕಲೆಯನ್ನು ಉಳಿಸಿ ಬೆಳೆಸುವಲ್ಲಿ ರಕ್ಷಿತ್‌ ಶೆಟ್ಟಿ ಪಡ್ರೆಯವರು ಅಮೂಲ್ಯ ಕೊಡುಗೆಯನ್ನೇ ನೀಡಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.

 ನರಹರಿ ರಾವ್‌, ಕೈಕಂಬ

ಟಾಪ್ ನ್ಯೂಸ್

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

BANDARAKERI

Udupi: ಭಕ್ತರಲ್ಲಿಗೆ ಭಾಗವತ ಭಂಡಾರಕೇರಿ ಶ್ರೀಗಳ ಸಾಧನೆ

Payan

Movie Release: ರಾಜ್ಯಾದ್ಯಂತ “ಪಯಣ್‌’ ಸಿನೆಮಾ ಸೆ.20ರಂದು ತೆರೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rrrr

Yakshagana;ನೋಡಿ ಕಲಿಯುವುದು ಬಹಳಷ್ಟಿದೆ: ಶಿವರಾಮ ಜೋಗಿ ಬಿ.ಸಿ.ರೋಡು

1-shab

Yakshagana ಭಾಗವತ ತಾನೊಬ್ಬನೇ ಮೆರೆಯುವುದಲ್ಲ:ನಾರಾಯಣ ಶಬರಾಯ ಜಿ.ಎ.

-Bolara-Subbaya-Shetty

YakshaRanga: ಯಕ್ಷಗಾನ ಉಳಿವಿಗೆ ಹೊಸ ಕಲಾವಿದರು ಪಣ ತೊಡಬೇಕು

1-aaa-chandra

Yakshagana ರಂಗದಲ್ಲಿ ಕುತೂಹಲ: ಭಕ್ತ ಚಂದ್ರ ಹಾಸನಲ್ಲ ಯಾರಿವನು ‘ವೀರ ಚಂದ್ರಹಾಸ’?

1-ramanna

Yakshagana ಹಿಮ್ಮೇಳ-ಮುಮ್ಮೇಳದ ನಡುವೆ ಸಮನ್ವಯ ಅಗತ್ಯ : ರಾಮಕೃಷ್ಣ ಮಂದಾರ್ತಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.